ಗೋಣಿಕೊಪ್ಪಲು, ಜ. 23: ಹಾಕಿ ಕೂರ್ಗ್ ಆಶ್ರಯದಲ್ಲಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಪಾಲಂದೀರ ಅಪ್ಪಯ್ಯ ಸ್ಮಾರಕ ಮಹಿಳಾ ಹಾಕಿ ಲೀಗ್‍ನಲ್ಲಿ ಅದಿತಿ ಟ್ಯಾಂಜರಿಯನ್ಸ್ ಮತ್ತೊಂದು ಗೆಲುವು ದಾಖಲಿಸಿತು.
ಅದಿತಿ ಟ್ಯಾಂಜರಿಯನ್ಸ್ ತಂಡವು ಪಿಂಕ್ ಫ್ಲೆಮಿಂಗೋಸ್ ತಂಡವನ್ನು 1-0 ಗೋಲುಗಳಿಂದ ಮಣಿಸಿತು. ಅದಿತಿ ಪರ 7ನೇ ನಿಮಿಷದಲ್ಲಿ ಶ್ರೀನಿಧಿ ಗೋಲು ಹೊಡೆದರು.
ಟೀಮ್ ಬುಟ್ಟಿಯಂಡ ಹಾಗೂ ಭಗವತಿ ಸ್ಪೋಟ್ರ್ಸ್ ಕ್ಲಬ್ ತಂಡಗಳ ನಡುವಿನ ಪಂದ್ಯ 2-2 ಗೋಲುಗಳ ಡ್ರಾದಲ್ಲಿ ಅಂತ್ಯ ಕಂಡಿತು. ಬುಟ್ಟಿಯಂಡ ಪರ 9ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‍ನ್ನು ಅಭಿನಶ್ರೀ, 19 ನೇ ನಿಮಿಷದಲ್ಲಿ ಅವಿನಾಶ್ರೀ ಗೋಲು ಹೊಡೆದರು. ಭಗವತಿ ಪರ 20ನೇ ನಿಮಿಷದಲ್ಲಿ ಕೃತಿಕಾ, 43ನೇ ನಿಮಿಷ ದಲ್ಲಿ ರೇಷ್ಮಾ ಗೋಲು ಬಾರಿಸಿದರು.
ಹಾಕಿ ಅಮ್ಮತ್ತಿ ಹಾಗೂ ನಾಲ್ನಾಡ್ ತಂಡಗಳ ನಡುವಿನ ಪಂದ್ಯ 1-1 ಗೋಲುಗಳ ಡ್ರಾ ಸಾಧಿಸಿತು. ನಾಲ್ನಾಡ್ ಪರ 25ನೇ ನಿಮಿಷದಲ್ಲಿ ನಿಹಾ, ಅಮ್ಮತ್ತಿ ಪರ ಕೋಮಲಾ 31ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್‍ನ್ನು ಗೋಲಾಗಿ ಪರಿವರ್ತಿಸಿದರು.
ಕೋರಲ್ ವಾಟರ್ಸ್ ಹಾಗೂ ಭರಣಿ ಇಲೆವೆನ್ ತಂಡಗಳ ನಡುವಿನ ಪಂದ್ಯ 1-1 ಗೋಲುಗಳಿಂದ ಡ್ರಾದಲ್ಲಿ ಅಂತ್ಯ ಕಂಡಿತು. ಕೋರಲ್ ಪರ 4ನೇ ನಿಮಿಷದಲ್ಲಿ ಶಾಲಿನಿ, ಭರಣಿ ಪರ 49ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅನ್ನು ಕಾವೇರಿ ಗೋಲಾಗಿ ಪರಿವರ್ತಿಸಿದರು.
ತೀರ್ಪುಗಾರರಾಗಿ ಗಣಪತಿ, ಬೋಪಣ್ಣ, ನಾಚಪ್ಪ, ಕುಪ್ಪಂಡ ದಿಲನ್, ಕೊಕ್ಕಂಡ ರೋಶನ್, ಅರುಣ್, ತಾಂತ್ರಿಕ ವರ್ಗದಲ್ಲಿ ದರ್ಶನ್ ದೇವಯ್ಯ ಹಾಗೂ ವಿನೋದ್ ಕಾರ್ಯನಿರ್ವಹಿಸಿದರು.