ಮಡಿಕೇರಿ, ಜು. 25: ಕೊಡಗು ಜಿಲ್ಲೆಯ ಮಟ್ಟಿಗೆ ಮಳೆರಾಯನಿ ಗೇನಾದರೂ ಮಕ್ಕಳ ಮೇಲೆ ಮುನಿಸಿದೆಯೇ? ಹೀಗೊಂದು ಪ್ರಶ್ನೆ ಕೆಲವೊಮ್ಮೆ ಮನದಲ್ಲಿ ಹುಟ್ಟಿಕೊಳ್ಳುತ್ತದೆ.ಹೌದು ಮಕ್ಕಳು ಸಮವಸ್ತ್ರ ಧರಿಸಿ ಶಾಲೆಗೆ ಸಿದ್ಧರಾಗಿ ಮನೆಯಿಂದ ಹೊರ ಬಂದರೆ ಸಾಕು ಅದೆಂಥಾ ಆರ್ಭಟ ಮಳೆರಾಯನದ್ದು !? ಹಿಡಿದಿರುವ ಕೊಡೆ, ತೊಟ್ಟಿರುವ ಮಳೆಕೋಟುಗಳು ಕೂಡ ಮಳೆ ಹನಿಯ ಏಟಿಗೆ ನಲುಗು ವದರೊಂದಿಗೆ ಮಕ್ಕಳು ಪರದಾಡು ವಂತಹ ಪರಿಸ್ಥಿತಿ. ಬೆಳಗ್ಗಿ ನಿಂದಲೇ ಸುರಿಯಲು ಆರಂಭವಾದರೆ ಮಕ್ಕಳು ಮರಳಿ ಮನೆ ಸೇರುವವರೆಗೂ ಮಳೆರಾಯ ಸುಮ್ಮನಿರಲಾರ. ಒಮ್ಮೊಮ್ಮೆ ಕೊಂಚ ವೇಗ ಸಡಿಲಿಸಿದರೆ ಪುಣ್ಯ.ಆದರೆ, ಮಕ್ಕಳಿಗೂ, ಪೋಷಕರಿಗೂ ಒಂದು ರೀತಿಯ ಬೇಸರ ಮೂಡುವದು ಮಳೆರಾಯನ ಚೆಲ್ಲಾಟವನ್ನು ಗಮನಿಸಿದಾಗ ಇತ್ತೀಚಿನ ಕೆಲ ದಿನಗಳಲ್ಲಿ ಮಕ್ಕಳು ಶಾಲೆಗೆ ಹೊರಟರೆಂದರೆ ಅದಕ್ಕೆ ಅಡ್ಡಿ ಪಡಿಸುವ ಮಳೆರಾಯ, ಮಕ್ಕಳಿಗೆ ರಜೆ ಇದ್ದರೆ ತಟಸ್ಥ ಧೋರಣೆ ತಾಳಿ ಬಿಡುತ್ತಾನೆ. ಇಂದು ಕೂಡ ಇದೇ ರೀತಿಯ ಬೆಳವಣಿಗೆ ಮರುಕಳಿಸಿದೆ.
ಇಂದು ಸರ್ಕಾರಿ ಬಸ್ ಕಾರ್ಮಿಕ ಮುಷ್ಕರ ಸಂಬಂಧ ಶಾಲಾ -ಕಾಲೇಜುಗಳಿಗೆ ರಜೆ. ಮಕ್ಕಳೆಲ್ಲರೂ ಮನೆಗಳಲ್ಲಿದ್ದರೆ ವರುಣನೂ ಕೂಡ ತನ್ನ ಮನೆಯಿಂದ ಹೊರಬರಲಿಲ್ಲ! ಬೆಳಗ್ಗಿನಿಂದಲೂ ಬಿಡುವು ನೀಡಿದ್ದ ಮಳೆರಾಯ ಮಧ್ಯಾಹ್ನದ ವೇಳೆಗೆ ಬಿಸಿಲಿಗೂ ಕೆಲ ಹೊತ್ತು ಭೂಮಂಡಲ ಸ್ಪರ್ಶಿಸಲು ಅವಕಾಶ ನೀಡಿದ. ಪರಿಣಾಮ ಮಕ್ಕಳು ಮಳೆರಾಯ ಬಂದಾನು ಎಂಬ ಭಯದ ನಡುವೆಯೇ ಕೆಲಹೊತ್ತು ಆಟೋಟಗಳಲ್ಲಿ ತೊಡಗಿಸಿಕೊಂಡರು. ಈ ಬೆಳವಣಿಗೆ ಕಂಡ ಪೋಷಕ ವರ್ಗದ ಹಲವರು ವರುಣನ ಚೆಲ್ಲಾಟದ ಬಗ್ಗೆ ‘ಶಕ್ತಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು. ‘ ಮಕ್ಕಳ ಮೇಲೆ ಮಳೆಗೆ ಕೋಪ ಕಾಣುತ್ತೆ? ಅದ್ಕೇನೆ ಮಕ್ಕಳಿಗೆ ಶಾಲೆ ಇದ್ರೆ ಮಳೆ ಬರುತ್ತೆ, ರಜೆ ಇದ್ರೆ ಮಳೆನೇ ಇರಲ್ಲ’ ಎಂದರು.ಈ ಮಾತು ಹಾಸ್ಯವೆನಿಸಿದರೂ ಸತ್ಯ. ಏಕೆಂದರೆ ಮಳೆರಾಯ ಮಾಡುತ್ತಿರುವ ಮೋಡಿಯೆ ಅಂತದ್ದು!!! ಇಂದಿನ ಕನಿಷ್ಟ ತಾಪಮಾನ 17ಅಔ ಗರಿಷ್ಠ 20ಅಔ ಮಧ್ಯಾಹ್ನ 22ಅಔ ತಲಪಿತ್ತು.