ಮಡಿಕೇರಿ, ಸೆ.23 :ಇತ್ತೀಚೆಗೆ ಮಳೆಗಾಗಿ ಪ್ರಾರ್ಥಿಸಲೆಂದು ಕೊಡಗಿನ ತಲಕಾವೇರಿಗೆ ಅನೇಕರು ಆಗಮಿಸುತ್ತಿದ್ದು, ಜಿಲ್ಲೆಯ ಜನತೆ ಈ ರೀತಿಯ ಮೌಢ್ಯಗಳಿಗೆ ಅವಕಾಶ ನೀಡಬಾರದೆಂದು ಅಲ್ಲಾರಂಡ ರಂಗ ಚಾವಡಿಯ ಸಂಚಾಲಕ ಅಲ್ಲಾರಂಡ ವಿಠಲ ನಂಜಪ್ಪ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಪ್ರಕೃತಿಯ ಕೊಡುಗೆಯಾಗಿ ಮಳೆಯಾಗುತ್ತಿದೆಯೇ ಹೊರತು ಯಾವದೇ ಪೂಜೆ ಪುನಸ್ಕಾರಗಳಿಂದ ಅಲ್ಲವೆಂದು ಅಭಿಪ್ರಾಯಪಟ್ಟರು. ತಾ.26 ರಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿಗಳು ಮಳೆಗಾಗಿ ಪ್ರಾರ್ಥಿಸಲು ತಲಕಾವೇರಿಗೆ ಆಗಮಿಸುತ್ತಿದ್ದಾರೆ. ಇವರನ್ನು ಅದ್ಧೂರಿಯಾಗಿ ಸ್ವಾಗತಿಸಲು ವ್ಯವಸ್ಥೆಗಳು ನಡೆಯುತ್ತಿದೆ. ಜಿಲ್ಲೆಯ ಜನ ಮೌಢ್ಯತೆಗೆ ರೆಡ್ ಕಾರ್ಪೆಟ್ ಹಾಕಬಾರದೆಂದ ಅವರು, ಹೋಮ ಹವನಾದಿ ವಿಶೇಷ ಪೂಜೆ ಪ್ರಾರ್ಥನೆ ಮಾಡುವವರು ಮಳೆÉಯೇ ಬಾರದ ಬರಗಾಲದ ಪ್ರದೇಶದಲ್ಲಿ ತಮ್ಮ ಮೌಢ್ಯತೆಯನ್ನು ಪ್ರದರ್ಶಿಸಲಿ ಎಂದರು. ಗೋಷ್ಠಿಯಲ್ಲಿ ನಾಪಂಡ ಪಟ್ಟು ಕಾವೇರಪ್ಪ ಉಪಸ್ಥಿತರಿದ್ದರು.