ವೀರಾಜಪೇಟೆ, ಜೂ. 19: ವೀರಾಜಪೇಟೆ ಬಳಿಯ ಪಾಲಂಗಾಲ ಗ್ರಾಮದ ಮಲೆತಿರಿಕೆ ಬೆಟ್ಟದಲ್ಲಿ ಇಂದು ಬೆಳಿಗ್ಗೆ ಆಕಸ್ಮಿಕ ಗುಂಡು ತಗುಲಿ ಅದೇ ಗ್ರಾಮದ ಕಾಫಿ ಪ್ಲಾಂಟರ್ ಎನ್. ಸತೀಶ್ ತಿಮ್ಮಯ್ಯ (43) ಎಂಬವರಿಗೆ ಹಣೆ ಭಾಗಕ್ಕೆ ಆಕಸ್ಮಿಕ ಗುಂಡು ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಪಾ¯ಂಗಾಲ ಗ್ರಾಮದ ಸತೀಶ್ ತಿಮ್ಮಯ್ಯ ಹಾಗೂ ಅದೇ ಗ್ರಾಮದ ಅಮ್ಮುಂಞ(46) ಅವರ ತಂಡ ಮಲೆತಿರಿಕೆಬೆಟ್ಟದಲ್ಲಿ ಬೇಟೆಗೆ ಹೋದಾಗ ಈ ಘಟನೆ ಸಂಭವಿಸಿದೆ. ಸಂಜೆ ವೇಳೆಗೆ ಅಮ್ಮುಂಞ ಬೇಟೆಗೆ ಬಳಸಿದ ಒಂಟಿ ನಳಿಗೆ ಕೋವಿ ಸಮೇತ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶರಣಾಗತನಾಗಿದ್ದಾನೆ.

ಗ್ರಾಮಾಂತರ ಪೊಲೀಸರು ಆಕಸ್ಮಿಕ ಸಾವಿನ ಕುರಿತು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಮೃತನಿಗೆ ಪತ್ನಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಬೇಟೆಗಾರರ ತಂಡ ಮಲೆತಿರಿಕೆ ಅರಣ್ಯದಲ್ಲಿ ಪ್ರಾಣಿ ಎಂದು ಗ್ರಹಿಸಿ ಗುಂಡು ಹಾರಿಸಿದಾಗ ಗಿಡಗಳÀ ಪೊದೆ ಮಧ್ಯದಲ್ಲಿದ್ದ ಸತೀಶ್‍ಗೆ ಗುಂಡು ತಗುಲಿರಬಹುದೆಂದು ಪೊಲೀಸ್ ವಲಯದಲ್ಲಿ ಶಂಕಿಸಲಾಗಿದೆ.