ಮಡಿಕೇರಿ, ಡಿ. 7: ದಕ್ಷಿಣ ಕೊಡಗಿನ ಗಡಿಭಾಗವಾದ ಬಿರುನಾಣಿಯಲ್ಲಿ ಕಳೆದ 54 ವರ್ಷದ ಹಿಂದೆ ಸ್ಥಾಪನೆಗೊಂಡಿರುವ ಮರೆನಾಡು ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭ ತಾ. 5 ರಂದು ನಡೆಯಿತು.
ವಿದ್ಯಾರ್ಥಿಗಳಿಗೆ, ಸಾರ್ವಜನಿಕ ರಿಗೆ ಕ್ರೀಡಾಕೂಟ, ಸಾಂಸ್ಕøತಿಕ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮತ್ತಿತರ ಕಾರ್ಯಕ್ರಮಗ ಳೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಶಾಲಾ ವಾರ್ಷಿಕೋತ್ಸವ ಆಚರಿಸಲ್ಪಟ್ಟಿತು. ಪಾಲ್ಗೊಂಡಿದ್ದವರಿಗೆ ಊಟೋಪಚಾರ, ಶಾಮಿಯಾನ ವ್ಯವಸ್ಥೆ, ಧ್ವನಿವರ್ಧಕ, ಸಾರ್ವಜನಿಕರ ಕ್ರೀಡೆಗೆ ಬಹುಮಾನ, ಜನರೇಟರ್ ವ್ಯವಸ್ಥೆ, ಸಾಂಸ್ಕøತಿಕ ಕಾರ್ಯಕ್ರಮ ಈ ರೀತಿಯಾಗಿ ಎಲ್ಲದಕ್ಕೂ ಒಬ್ಬೊಬ್ಬರು ದಾನಿಗಳು ತಮ್ಮ ಕಾಣಿಕೆ ನೀಡಿ ಮಕ್ಕಳೊಂದಿಗೆ ಭಾಗಿಗಳಾಗಿದ್ದು ಇಲ್ಲಿನ ವಿಶೇಷವಾಗಿತ್ತು.
ಕ್ರೀಡೋತ್ಸವದ ಧ್ವಜಾ ರೋಹಣವನ್ನು ಆಡಳಿತ ಮಂಡಳಿಯ ಅಧ್ಯಕ್ಷ ಕಾಳಿಮಾಡ ಎ. ಮುತ್ತಣ್ಣ ಅವರು ನೆರವೇರಿಸಿದರು. ಕ್ರೀಡಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚೊಟ್ಟಂಗಡ ಕುಶಾಲಪ್ಪ ಆಗಮಿಸಿದ್ದರು. ನೃತ್ಯ, ಕಾವಯತು, ಸ್ತಬ್ಧ ಚಿತ್ರ ಪ್ರದರ್ಶನ ಹಾಗೂ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕ್ರೀಡಾಸ್ಪರ್ಧೆಗಳನ್ನು ನಡೆಸಲಾಯಿತು. ಅಪರಾಹ್ನ ಸಭಾ ಕಾರ್ಯಕ್ರಮ ಆಡಳಿತ ಮಂಡಳಿಯ ಅಧ್ಯಕ್ಷ ಕಾಳಿಮಾಡ ಎ. ಮುತ್ತಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಎಮ್. ಕಿಶೋರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಳಿಮಾಡ ಎಮ್. ಮೋಟಯ್ಯ ಅವರು ಮಕ್ಕಳಿಗೆ, ಸಾರ್ವಜನಿಕರಿಗೆ ಯೋಗ ಮತ್ತು ನಾಡಿನ ಸಂಸ್ಕøತಿಯ ಮಹತ್ವದ ಬಗ್ಗೆ ತಿಳಿ ಹೇಳಿದರು. ಮರೆನಾಡು ಪ್ರೌಢಶಾಲೆಯ ಸ್ಥಾಪಕ ಸದಸ್ಯ, ಹಿರಿಯ ಚೇತನ ಕುಪ್ಪುಡೀರ ಐ. ಕಾಳಪ್ಪ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಧಾನ ಭಾಷಣಕಾರರಾಗಿ ಮೈಸೂರಿನ ಮಹಾಜನ ಪದವಿಪೂರ್ವ ಕಾಲೇಜಿನ ರಸಾಯನಶಾಸ್ತ್ರ ವಿಷಯದ ಉಪನ್ಯಾಸಕ ಎಮ್.ಜಿ. ಪ್ರಭುದೇವ್ ಅವರು ಪ್ರಕೃತಿಗೆ ಮಾರಕವಾಗುವ ರೀತಿಯಲ್ಲಿ ಜೈವಿಕ ಕ್ರಿಮಿನಾಶಕಗಳನ್ನು ಬಳಸುವದರ ಬಗ್ಗೆ ಸೂಕ್ಷ್ಮವಾಗಿ ಅರ್ಥೈಸಿದರು.
ಗೌರವ ಅತಿಥಿಗಳಾಗಿದ್ದ ಜಿಲ್ಲಾ ಪಂಚಾಯತ್ ಸದಸ್ಯೆ ಅಪ್ಪಂಡೇರಂಡ ಭವ್ಯ ವಿದ್ಯಾರ್ಥಿನಿಯರಿಗೆ ವಸತಿ ನಿಲಯ ನಿರ್ಮಾಣ ಮಾಡಲು ಪ್ರಯತ್ನಿಸುವ ಭರವಸೆಯನ್ನು ನೀಡಿದರು. ಬಿರುನಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿಟ್ಟಿಯಂಡ ತಂಬಿ ನಾಣಯ್ಯ ಮಕ್ಕಳಿಗೆ ಸೈಕಲ್ ವಿತರಣೆ ಮಾಡುವದರ ಜೊತೆಗೆ ಸಾಮಾನ್ಯ ಪ್ರಜೆಗಳಿಂದ ಮಾತ್ರ ದೇಶ ಕಟ್ಟಲು ಸಾಧ್ಯ ಎಂದು ಹೇಳಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷ ಬೊಟ್ಟಂಗಡ ಬಿ. ಮಾಚಯ್ಯ ಹಾಜರಿದ್ದರು.
ನಾಗರಾಜ್ ವಂದಿಸಿದರು. ಸಂಜೆ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ಜನ ಮೆಚ್ಚುಗೆಗೆ ಪಾತ್ರವಾಯಿತು. ಹೆಚ್.ಸಿ. ಶ್ರೀನಿವಾಸ ಅವರಿಂದ ಸುಗಮ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.