ನಾಪೆÉÇೀಕ್ಲು, ಜ. 6: ಸಮೀಪದ ಯವಕಪಾಡಿ ಗ್ರಾಮದ ಕುಡಿಯರ ಮುತ್ತಪ್ಪ ಎಂಬವರ ಮನೆ ಮೇಲೆ ಗುರುವಾರ ಒಂಟಿ ಸಲಗವೊಂದು ಧಾಳಿ ಮಾಡಿದ ಪರಿಣಾಮ ಮನೆಯ ಮುಂದಿದ್ದ ಮರ ಮನೆಯ ಮೇಲೆ ಬಿದ್ದು ಸುಮಾರು 12 ಶೀಟುಗಳು ಸೇರಿ 300 ಕ್ಕೂ ಅಧಿಕ ಹೆಂಚುಗಳು ಪುಡಿಯಾಗಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರಂಗನಾಥ್ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ.

ಗ್ರಾಮಸ್ಥರ ಆಕ್ರೋಶ: ಯವಕಪಾಡಿ, ನಾಲಡಿ, ಮರಂದೋಡ, ಚೇಲಾವರ ಗ್ರಾಮಗಳಲ್ಲಿ ಕಾಡಾನೆಗಳು ನಿರಂತರವಾಗಿ ಬೆಳೆಗಾರರ ಆಸ್ತಿ-ಪಾಸ್ತಿ ನಷ್ಟಗೊಳಿಸುತ್ತಿವೆ. ಆದರೂ ಸರಕಾರ, ಅರಣ್ಯ ಇಲಾಖೆ ಯಾವದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.