ಸುಂಟಿಕೊಪ್ಪ, ಡಿ. 25: ಇಲ್ಲಿನ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲರವ ಕಾರ್ಯಕ್ರಮ ನಡೆಯಿತು. ವಿವಿಧ ಭಂಗಿಯ ಅಭಿನಯ ನೃತ್ಯ, ಹಾಸ್ಯನಾಟಕ, ಕ್ರಿಸ್‍ಮಸ್, ನೃತ್ಯ, ಆಧುನಿಕ ನೃತ್ಯ ವಿದ್ಯಾರ್ಥಿಗಳ ದೈಹಿಕ ಕವಾಯತ್, ರಿಬ್ಬನ್ ಕವಾಯತ್ ನೆರೆದಿದ್ದವರ ಮನ ರಂಜಿಸಿತು.

ಜಾತಿ, ಮತ, ಧರ್ಮ ಬೇರೆ ಬೇರೆಯಾದರೂ ನಾವೆಲ್ಲರೂ ಒಟ್ಟಾಗಿ ಸೌಹಾರ್ದಯುತವಾಗಿ ಜೀವನ ನಡೆಸಬೇಕೆಂಬ ಸಂದೇಶ ಸಾರುವ ಪುಟಾಣಿ ಮಕ್ಕಳ ನೃತ್ಯ ಆಕರ್ಷಕವಾಗಿತ್ತು.

ಕಾರ್ಯಕ್ರಮ ನಿರೂಪಿಸುವ ದರಿಂದ ಸ್ವಾಗತ, ಪ್ರಾರ್ಥನೆ, ವಂದಾನಾರ್ಪಣೆಯನ್ನು ವಿದ್ಯಾರ್ಥಿ ಗಳೇ ನಿರ್ವಹಿಸಿ ಪೋಷಕರು ಹಾಗೂ ಶಿಕ್ಷಕರಿಂದ ಬೇಶ್ ಎನಿಸಿಕೊಂಡರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಜೆನ್‍ಕ್ರಾಸ್ತ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಅವರ ಪ್ರತಿಭೆ ಅನಾವರಣಗೊಳಿಸಲು ಇದು ವೇದಿಕೆಯಾಗಿದೆ. ಆಟೋಟ ಸ್ಪರ್ಧೆಯಂತೆ ಸಾಂಸ್ಕøತಿಕ ಪ್ರತಿಭೆ ಹೊರಹೊಮ್ಮಲು ಮಕ್ಕಳ ಕಲರವ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು. ಅಧ್ಯಕ್ಷತೆಯನ್ನು ಶಾಲೆಯ ವ್ಯವಸ್ಥಾಪಕರಾದ ವೈಲೆಟ್ ರಾಡ್ರಿಗಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಣ ಸಂಯೋಜಕÀ ಮೂರ್ತಿ ಮಾತನಾಡಿ ಮಕ್ಕಳ ಕಲರವ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಿ ವಿದ್ಯಾರ್ಥಿಗಳು ಪ್ರತಿಭೆ ಹೊರಚೆಲ್ಲಿದ್ದು ಖುಷಿ ತಂದಿದೆ. ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಯಲು ಇಂಥಹ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಗಳಾಗಿದ್ದ ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ವಿದ್ಯೆಯೊಂದಿಗೆ ಮಕ್ಕಳ ಕಲೆಯನ್ನು ಅಭಿವೃದ್ಧಿ ಪಡಿಸುವ ಇಂತಹ ಕಾರ್ಯಕ್ರಮ ಎಲ್ಲಾ ಶಾಲೆಗಳಲ್ಲಿ ನಡೆಯಬೇಕು ಎಂದರು.

ಈ ಸಂದರ್ಭ ನಿವೃತ್ತ ಶಿಕ್ಷಕಿ ದಾನಿಗಳಾದ ಹ್ಯಾನಿ ಮಸ್ಕರೇನಸ್, ನಿವೃತ್ತ ಶಿಕ್ಷಕಿ ಮೇರಿ ಮೆನೇಜೆಸ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಶಶಿಧರ್, ಉಪಾಧ್ಯಕ್ಷೆ ಖತೀಜ, ದೈಹಿಕ ಶಿಕ್ಷಣ ಶಿಕ್ಷಕ ಸತೀಶ್, ಮಾಜಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಜೆಫ್ರಿಜಾನ್ ಹಾಗೂ ಪೋಷಕರು ಇದ್ದರು.

.