ಮಡಿಕೇರಿ, ಸೆ: 26: ಇಲ್ಲಿನ ಆಲ್ಪೆನ್ ಗ್ಲೋ ಹೋಂಸ್ಟೇ ಮಾಲೀಕರಾದ ಜಯಶ್ರೀ ಅನಂತಶಯನ ಅವರ ಆತಿಥ್ಯ ಸೇವೆ ಪರಿಗಣಿಸಿ ಮದರ್ ಥೆರೆಸಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಕೇರಳ ತ್ರಿಶೂರಿನ ಇಂಟಿಗ್ರೇಟೆಡ್ ಕೌನ್ಸಿಲ್ ಫಾರ್ ಸೊಷಿಯೊ ಎಕನಾಮಿಕ್ಸ್ ಸಂಸ್ಥೆ ಕೊಡಮಾಡುವ ಈ ಪ್ರತಿಷ್ಠಿತ ಪ್ರಶಸ್ತಿಗೆ ಜಯಶ್ರೀ ಭಾಜನರಾಗಿದ್ದಾರೆ. ಹೋಂಸ್ಟೇಗೆ ಭೇಟಿ ನೀಡಿದ ಬಳಿಕ ಅತಿಥಿಗಳು ನೀಡುವ ಉತ್ತಮ ಪ್ರತಿಕ್ರಿಯೆ ಆಧರಿಸಿ ಪ್ರಶಸ್ತಿ ತೀರ್ಮಾನಿಸಲಾಗಿದೆ. ಈ ಹಿಂದೆ ಜಯಶ್ರೀ ಅನಂತಶಯನ ಅವರಿಗೆ ರಾಷ್ಟ್ರೀಯ ಉದ್ಯೋಗ ರತ್ನ ಪ್ರಶಸ್ತಿಯೂ ಲಭಿಸಿತ್ತು.