ನಗರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಸಂದರ್ಭ ಗೈರು ಹಾಜರಿಯಾಗಿ ಬಿಜೆಪಿ ಸದಸ್ಯರ ಟೀಕೆಗೆ ಗುರಿಯಾಗಿದ್ದ ಸಂಸದ ಪ್ರತಾಪ್ ಸಿಂಹ ಸ್ಥಾಯಿ ಸಮಿತಿ ಆಯ್ಕೆಗೆ ಹಾಜರಿಯಾಗಿದ್ದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭ ಸಂಸದರು ಹಾಜರಿಯಾಗಿದ್ದರೆ ಬಿಜೆಪಿ ಪಾಳೆಯ ನಿರಾಯಾಸವಾಗಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿತ್ತು. ಆದರೆ ಅಧ್ಯಕ್ಷ ಸಾಉಪಾಧ್ಯಕ್ಷ ಸ್ಥಾನ ಮಾತ್ರ ಬಿಜೆಪಿಗೆ ಬಂದಿತ್ತು. ಅಧ್ಯಕ್ಷ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ನಗರಸಭೆ ಸದಸ್ಯರು ಸೇರಿದಂತೆ ಬಿಜೆಪಿ ಕಾರ್ಯಕರ್ತರ ಟೀಕೆಗೆ ಗುರಿಯಾಗ ಬೇಕಾಯಿತು. ್ಥನ ಕೈ ತಪ್ಪಿ ಸ್ಥಾಯಿ ಸಮಿತಿ ಗುಪ್ತ ಮತದಾನ ಪ್ರಕ್ರಿಯೆಯಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಬಿಜೆಪಿ ಪಾಳೆಯದಲ್ಲಿ ಕಂಡು ಬಂದರೆ, ವಿಧಾನ ಪರಿಷತ್ ಸದಸ್ಯ ಶಾಂತೆಯಂಡ ವೀಣಾ ಅಚ್ಚಯ್ಯ ಕಾಂಗ್ರೆಸ್ ಪಾಳೆಯದಲ್ಲಿ ಕಂಡು ಬಂದು ಮತದಾನ ಮಾಡಿದರು.