ಚೆಟ್ಟಳ್ಳಿ, ಜ. 31: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ ಪ್ರತಿಕೃತಿ ದಹಿಸಿದ ಪ್ರಕರಣವನ್ನು ಸಂಘದ ಸಭೆಯಲ್ಲಿ ಖಂಡಿಸಲಾಯಿತು.
ಸಂಘದÀ ಉಪಾಧ್ಯಕ್ಷ ಹೆಚ್.ಎಸ್ ತಿಮ್ಮಪ್ಪಯ್ಯ ಅವರು ಮಾತನಾಡಿ, ನೋಟ್ ರದ್ದತಿಯಾದ ಕೆಲವೇ ದಿನಗಳಲ್ಲಿ ತಾಲೂಕು ಪಂಚಾಯಿತಿ ಸದಸ್ಯರೊಬ್ಬರ 35 ಲಕ್ಷದಷ್ಟು 2 ಸಾವಿರ ಮೌಲ್ಯದ ನೋಟುಗಳು ರೆಸಾರ್ಟ್ವೊಂದರಲ್ಲಿ ದೊರಕಿರುವದರ ಬಗ್ಗೆ ಪ್ರಶ್ನಿಸಿದವರನ್ನೇ ಅವಮಾನ ಮಾಡಿರುವದು ಖಂಡನೀಯ ಎಂದರು. ಭ್ರಷ್ಟಾಚಾರದ ವಿರುದ್ಧ ದನಿಯೆತ್ತುವದು ಪ್ರತಿಯೊಬ್ಬ ಭಾರತೀಯನ ಹಕ್ಕು, ಈ ಬಗ್ಗೆ ಅರಿವಿಲ್ಲದಿರುವ ಕಾಂಗ್ರೆಸ್ ಮುಖಂಡರು ಭ್ರಷ್ಟ ವ್ಯಕ್ತಿಯ ಪರವಾಗಿ ನಿಂತು ಓರ್ವ ರೈತಪರ ವ್ಯಕ್ತಿಗೆ ಅವಮಾನ ಮಾಡಿರುವದನ್ನು ತೀವ್ರವಾಗಿ ಖಂಡಿಸಿ ಪ್ರತಿಭಟಿಸುತ್ತೇವೆ. ಇನ್ನು ಮುಂದೆ ಈ ರೀತಿಯ ಅವಹೇಳನಕಾರಿ ಬೆಳವಣಿಗೆ ಕೊಡಗಿನ ರಾಜಕೀಯದಲ್ಲಿ ಮರುಕಳಿಸಬಾರದು ಎಂದು ಹೇಳಿದರು.
ಸಭೆಯಲ್ಲಿ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ , ನಿರ್ದೇಶಕ ನೂಜಿಬೈಲು ಡಿ. ನಾಣಯ್ಯ, ಪುತ್ತರೀರ ಎಂ. ಸೀತಮ್ಮ, ಕೊಂಗೇಟಿರ ವಾಣಿಕಾಳಪ್ಪ, ಬಟ್ಟೀರ ಕೆ. ಅಪ್ಪಣ್ಣ, ಕಣಜಾಲು ಕೆ, ಪೂವಯ್ಯ, ಶಾಂತಪ್ಪ, ಮರದಾಳು ಎಸ್, ಉಲ್ಲಾಸ್, ಪೇರಿಯನ ಎಸ್ ಪೂಣಚ್ಚ, ಸಹಕಾರ ಸಂಘಗಳ ಮೇ. ನಿರ್ದೇಶಕ ಹೆಚ್. ಟಿ. ನವೀನ್ಕುಮಾರ್, ಪರಿಣಿತ ನಿರ್ದೇಶಕರುಗಳಾದ ಕೊಳಂಬೆ ಆರ್. ಯಾದವ, ಚೋಳಪಂಡ ಜೆ. ಪೂವಯ್ಯ ಹಾಜರಿದ್ದರು.