ಮಡಿಕೇರಿ, ಅ. 4: ಮಡಿಕೇರಿ ದಸರಾ ಜನೋತ್ಸವದ ಪ್ರಯುಕ್ತ ದಸರಾ ಸಾಂಸ್ಕøತಿಕ ಸಮಿತಿ ವತಿಯಿಂದ ಇಲ್ಲಿನ ಗಾಂಧಿ ಮೈದಾನದಲ್ಲಿನ ಕಲಾಸಂಭ್ರಮ ವೇದಿಕೆಯಲ್ಲಿ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ತಾ. 3 ರಂದು ಮಡಿಕೇರಿಯ ಗ್ರೀನ್ ಮೌಂಟೇನ್ ಕಾಲೇಜು ತಂಡದಿಂದ ನೃತ್ಯ ವೈವಿಧ್ಯ, ವೀರಾಜಪೇಟೆ ನಾಟ್ಯ ಮೈಯೂರಿ ನೃತ್ಯ ಶಾಲಾ ತಂಡದಿಂದ ಸಾಂಸ್ಕøತಿಕ ವೈವಿಧÀ್ಯ, ಕುಶಾಲನಗರದ ಶಾರದಾ ಕಲಾ ಕೇಂದ್ರದಿಂದ ಕರಗಾಟ, ಮಡಿಕೇರಿಯ ಗೌಡ ಮಹಿಳಾ ಒಕ್ಕೂಟದಿಂದ ನೃತ್ಯ ಪ್ರದರ್ಶನ, ಬೆಂಗಳೂರಿನ ಭೈರವಿ ಡಾನ್ಸ್ ಗ್ರೂಪ್ನಿಂದ ನೃತ್ಯ ಕಾರ್ಯಕ್ರಮಗಳು ಗಮನ ಸೆಳೆದವು ವಿಶೇಷವಾಗಿ ಮಡಿಕೇರಿಯ ವಿಕಾಸ್ ವಿಕಲಚೇತನ ಸಂಸ್ಥೆಯ ಅಂಧ ದಂಪತಿಗಳಾದ ನರಸಿಂಗ್ ಹಾಗೂ ನಗೀನ ಅವರುಗಳ ಹಾಡುಗಾರಿಕೆ ಕಲಾಸಕ್ತರ ಮನಸೂರೆಗೊಂಡಿತು.