ಮಡಿಕೇರಿ, ಅ. 5: ಮಡಿಕೇರಿ ದಸರಾ ಜನೋತ್ಸವ ಕಾರ್ಯಕ್ರಮದಲ್ಲಿ ತಾ. 4 ರಂದು ವೀರಾಜಪೇಟೆಯ ಜಗನ್ಮೋಹನ ನಾಟ್ಯಾಲಯ ತಂಡದಿಂದ ಮೋಹಿನಿ ಆಟಂ, ಕೂಚುಪುಡಿ ನೃತ್ಯ, ಮಂಗಳೂರಿನ ಹೆಜ್ಜೆನಾದ ತಂಡದ ಯುವ ನೃತ್ಯಪಟು ಜ್ಞಾನ ಐತಾಳ್ ಮತ್ತು ತಂಡದಿಂದ ಸಂಗೀತ ನೃತ್ಯ ವೈವಿಧ್ಯ, ಮಡಿಕೇರಿ ನೆಲ್ಲಕ್ಕಿ ಯುವತಿ ಮಂಡಳಿಯಿಂದ ಅರೆಭಾಷೆ ಸಾಂಸ್ಕøತಿಕ ವೈಭವ, ಬಿರುನಾಣಿಯ ಶ್ರೀನಿವಾಸ್ ಮತ್ತು ತಂಡದಿಂದ ಗೋಲ್ಡನ್ ಸಾಂಗ್ಸ್ ಗಾನ ಸಂಭ್ರಮ ನಡೆಯಿತು.