ಮಡಿಕೇರಿ, ಸೆ.14: ಮಡಿಕೇರಿ ದಸರಾ ಜನೋತ್ಸವ ಸಾಂಸ್ಕøತಿಕ ಸಮಿತಿ ವತಿಯಿಂದ ಅಕ್ಟೋಬರ್ 7 ರಂದು ಶುಕ್ರವಾರ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಹಿಳಾ ದಸರಾ ಆಯೋಜಿಸಲಾಗಿದೆ.ಈ ಬಾರಿಯೂ ಮಹಿಳಾ ದಸರಾ ಅಂಗವಾಗಿ ಕೊಡಗಿನ ಮಹಿಳೆಯರಿಗಾಗಿ, ಮಹಿಳಾ ಸಂಘ, ಸಂಘಟನೆಗಳಿಗಾಗಿ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಜಿಲ್ಲೆಯ ಮಹಿಳಾ ಸಂಘಗಳಿಗಾಗಿ ವಿವಿಧ ಉತ್ಪನ್ನದ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ಅಂತೆಯೇ ಮಹಿಳೆಯರಿಗಾಗಿ ಮೆಹಂದಿ ಹಾಕುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಸ್ಪರ್ಧೆ, ಏಕಪಾತ್ರಾಭಿನಯ, ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ ಆಯೋಜಿಸಲಾಗಿದೆ.

ಈ ಬಾರಿಯ ಮಹಿಳಾ ದಸರಾ ವಿಶೇಷವಾಗಿ ಜಿಲ್ಲೆಯ ಮಹಿಳೆಯರಿಗಾಗಿ ಸಿರಿಧಾನ್ಯ ಮೇಳ ಆಯೋಜಿಸಲಾಗಿದ್ದು ಔಷಧೀಯ ಸಸ್ಯಗಳು, ಧಾನ್ಯಗಳಿಂದ ತಯಾರಿಸಿದ ಪಾಕ ವಿಧಾನಗಳನ್ನು (ಅಡುಗೆ) ತಯಾರಿಸಿ ತಂದು ಸ್ಪರ್ಧೆಯಲ್ಲಿಡಬಹುದಾಗಿದೆ. ಸಿರಿಧಾನ್ಯ ಮೇಳದ ಸ್ಪರ್ಧೆಯಲ್ಲಿ ಅಡುಗೆ ತಯಾರಿಕೆಯ ವಿಧಾನ, ಬಳಸಿದ ಪದಾರ್ಥಗಳ ಮಾಹಿತಿ ತಯಾರಿಕೆ ಯೊಂದಿಗೆ ಪ್ರದರ್ಶಿಸಬೇಕಾಗುತ್ತದೆ. ಸಿರಿಧಾನ್ಯ ಮೇಳದ ಮೂಲಕ ದೇಶಿ ಖಾದ್ಯಗಳ ತಯಾರಿಕೆಯನ್ನು ಪೆÇ್ರೀತ್ಸಾಹಿಸಲಾಗುತ್ತಿದೆ. ಎಂದು ದಸರಾ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿರಿಧಾನ್ಯ ಮೇಳ ಸ್ಪರ್ಧೆಗಾಗಿ ಹೆಸರು ನೋಂದಾವಣಿಗೆ ಕೊನೇ ದಿನಾಂಕ ಸೆಪ್ಟಂಬರ್ 24. ಹೆಸರು ನೋಂದಾ¬ ುಸಲು ಸಂಪರ್ಕ ಸಂಖ್ಯೆಗಳು ಚೆಪ್ಪುಡಿರ ಸರು ಸತೀಶ್ - 9845426744, ಸಂಗೀತ ಪ್ರಸನ್ನ 9591173292

ಜಿಲ್ಲೆಯ ಮಹಿಳಾ ಸಂಘಗಳಿಗಾಗಿ ವಿವಿಧ ಉತ್ಪನ್ನಗಳ ಪ್ರದರ್ಶನ, ಮಾರಾಟ ಮೇಳ ಆಯೋಜಿಸಲಾಗಿದೆ. ಅಂತೆಯೇ ಮಹಿಳೆಯರಿಗಾಗಿ ಮೆಹಂದಿ ಹಾಕುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಸ್ಪರ್ಧೆ, ಏಕಪಾತ್ರಾಭಿನಯ, ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆಗಳ ಹೆಸರು ನೋಂದಾವಣಿಗೆ ಕೊನೇ ದಿನಾಂಕ ಸೆಪ್ಟಂಬರ್ 24. ನೋಂದಣಿಗಾಗಿ ಸಂಪರ್ಕ ಸಂಖ್ಯೆಗಳು - ಸಂಗೀತ ಪ್ರಸನ್ನ 9591173292 - ಸವಿತಾ ರಾಕೇಶ್ -7026360963. ವೀಣಾಕ್ಷಿ -8762303208.

ಎಲ್ಲಾ ಸ್ಪರ್ಧೆಗಳು ಅಕ್ಚೋಬರ್ 7 ರಂದು ಶುಕ್ರವಾರ ಮಡಿಕೇರಿಯ ಗಾಂಧಿ ಮೈದಾನದಲ್ಲಿನ ಕಲಾಸಂಭ್ರಮ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಜರುಗಲಿದೆ ಎಂದು ದಸರಾ ಸಾಂಸ್ಕøತಿಕ ಸಮಿತಿ ಪ್ರಕಟಣೆ ತಿಳಿಸಿದೆ.