ಸುಂಟಿಕೊಪ್ಪ, ಜೂ. 27: ಹೆದ್ದಾರಿ ಬದಿಯಲ್ಲಿ ಭಾರಿ ಗಾತ್ರದ ಲಾರಿಯೊಂದು ಮಗುಚ್ಚಿ ಬಿದ್ದ ಘಟನೆ ನಡೆದಿದೆ.

ಉಡುಪಿಯಿಂದ ಮೈಸೂರಿಗೆ ತೆರಳುತ್ತಿದ್ದ ಕಂಟೈನರ್ ಲಾರಿ (ಆರ್‍ಜೆ-14-ಜಿಜಿ6424) ಇಂದು ಸಂಜೆ 5.15ರ ವೇಳೆಗೆ ಕೊಡಗರಹಳ್ಳಿ ಸಮೀಪದ ಮಾರುತಿ ನಗರದ ಬಳಿಯ ತಿರುವಿನಲ್ಲಿ ವಾಹನವೊಂದಕ್ಕೆ ಹಾದಿ ಬಿಡುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ರಸ್ತೆ ಬದಿಗೆ ಮಗುಚಿಕೊಂಡಿದೆ. ಅದೃಷ್ಟವಶಾತ್ ಪ್ರಾಣ ಹಾನಿ ತಪ್ಪಿದೆ.