ವಿರಾಜಪೇಟೆ, ಅ. 16: ಇಬ್ಬರು ಮಕ್ಕಳು ತನಗೆ ಹುಟ್ಟಿಲ್ಲ ಎಂದು ಪತ್ನಿಯ ಶೀಲ ಶಂಕಿಸಿ ಇಬ್ಬರು ಮಕ್ಕಳನ್ನು ಶಾಲೆಯಿಂದ ಕರೆದೊಯ್ದು ಹೊಳೆಯಲ್ಲಿ ಮುಳುಗಿಸಿ ಕೊಲೆ ಮಾಡಿದ ಆರೋಪದ ಮೇರೆ ಬೆಟ್ಟಕುರುಬರ ಎಂ. ಸುರೇಶ್ ಎಂಬಾತನಿಗೆ ಇಲ್ಲಿನ ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಟಿ.ಎಂ. ನಾಗಾರಜ್ ಅವರು ಜೀವಾವಧಿ ಶಿಕ್ಷೆ ಹಾಗೂ ರೂ 50,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ತಾ. 22-9-2009ರಂದು ಶಾಲೆಗೆ ತೆರಳಿದ್ದ ತನ್ನ ಮಕ್ಕಳಾದ ರೂಪೇಶ್ ಹಾಗೂ ಧನಿಯಾ ಎಂಬ ಇಬ್ಬರು ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬಂದು ಅಮ್ಮತ್ತಿ ಬಳಿಯ ಬಿ. ಬೋಜು ಎಂಬವರಿಗೆ ಸೇರಿದ ಕಾಫಿ ತೋಟದ ಬಳಿ ಹರಿಯುತ್ತಿದ್ದ ಕೊಮ್ಮೆತೋಡು ಹೊಳೆಗೆ ಮುಳುಗಿಸಿ ಕೊಲೆ ಮಾಡಿದ ದೂರಿನ ಮೇರೆ ಗ್ರಾಮಾಂತರ ಪೊಲೀಸರು ಸುರೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. ಕೊಲೆ ಪ್ರಕರಣದ ತ&divound;ಖಾಧಿಕಾರಿಯಾಗಿದ್ದ ಅಂದಿನ ವೃತ್ತ ನಿರೀಕ್ಷಕ ಶೈಲೇಂದ್ರ ಅವರು ಪ್ರಕರಣದ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುರೇಶ್ನ ಪತ್ನಿ ಪ್ರೇಮಾ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ನಾಗರಾಜ್ ಅವರು ಕೊಲೆ ಪ್ರಕರಣ ಸಾಬೀತಾದ ಹಿನೆÀ್ನಲೆಯಲ್ಲಿ ಆರೋಪಿಗೆ ಶಿಕ್ಷೆ ಪ್ರಕಟಿಸಿದ್ದು ದಂಡದ ರೂಪದಲ್ಲಿ ಪಾವತಿಯಾಗುವ ರೂ 50.000 ನಗದು ಹಣದಲ್ಲಿ ಮಕ್ಕಳ ತಾಯಿ ಪ್ರೇಮ ಎಂಬಾಕೆಗೆ ಪರಿಹಾರವಾಗಿ ರೂ 25000 ನಗದು ಪಾವತಿಸುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ ಒಂದು ವರ್ಷ ಅಧಿಕ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.
ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ನಾಗರಾಜ ಆಚಾರ್ ವಾದಿಸಿದರು.