ಮಡಿಕೇರಿ,ಡಿ.20; ಕಡಗದಾಳು ಕ್ಷೇತ್ರ ತನ್ನನ್ನು ಗೆಲ್ಲಿಸಿದ ಕ್ಷೇತ್ರವಾಗಿದ್ದು, ಮಕ್ಕಂದೂರು ತನ್ನ ಕ್ಷೇತ್ರವಾಗಿದೆ. ಕಡಗದಾಳು ಕ್ಷೇತ್ರದ ಅಭಿವೃದ್ಧಿ ಯೊಂದಿಗೆ ಮಕ್ಕಂದೂರು ಕ್ಷೇತ್ರದ ಅಭಿವೃದ್ಧಿಗೂ ಆದ್ಯತೆ ನೀಡಲಾಗುವ ದೆಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಹೇಳಿದರು.ಮಕ್ಕಂದೂರು ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ಅಲ್ಲಿನ ಕೊಡವ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಹಿಂದೆ ಬಿಜೆಪಿ ಸರಕಾರ ಇದ್ದಾಗ ಜಿಲ್ಲೆಗೆ ರೂ. 1800 ಕೋಟಿ ಅನುದಾನ ಬಂದಿತ್ತು, ಇದೀಗ ಯಾವದೇ ಅನುದಾನ ಬರುತ್ತಿಲ್ಲ. ಅಬಿವೃದ್ಧಿ ಕೆಲಸಗಳು ಆಗುತ್ತಿಲ್ಲ ತಾನೂ ಅಧ್ಯಕ್ಷ ನಾಗಿದ್ದರೂ ನಿಮ್ಮ ಹರೀಶನಾಗಿಯೇ ಸೇವೆಗೆ ಬದ್ಧನಾಗಿರುವದಾಗಿ ಹೇಳಿದರು.ಜಿ.ಪಂ. ಮಾಜಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ಬಿಜೆಪಿ ಹಿರಿಯರು ಕಷ್ಟಪಟ್ಟು ಕಟ್ಟಿದ ಪಕ್ಷವಾಗಿದ್ದು, ಬೆಳೆಯುತ್ತಾ ಬಂದಿದೆ. ಬಿಜೆಪಿ ಆಡಳಿತದಲ್ಲಿದ್ದಾಗ ಸಾಕಷ್ಟು ಅನುದಾನ ಬಂದಿದ್ದು, ಅಭಿವೃದ್ಧಿ ಕಾರ್ಯ ಗಳಾಗಿವೆ. ಆದರೆ, ಇದೀಗ ಕಾಂಗ್ರೆಸ್‍ನ ದುರಾಡಳಿತದಿಂದ ಯಾವದೇ ಅನುದಾನ ಬರುತ್ತಿಲ್ಲ, ಅನುದಾನ ಬಂದಿರುವದಾಗಿ ಹೇಳಿಕೆಗಳು ಮಾತ್ರ ಬರುತ್ತಿವೆ ಎಂದು ಟೀಕಿಸಿದರು. ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ಸರಕಾರದಿಂದ ಯಾವದೇ ರಕ್ಷಣೆ ಇಲ್ಲದಂತಾಗಿದೆ. ಹಿಂದೂಗಳ ಮೇಲೆ ಹಲ್ಲೆ, ಹತ್ಯೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ, ಈ ಬಗ್ಗೆ ಜಾಗ್ರತೆ ವಹಿಸುವ ಅನಿವಾರ್ಯತೆ ಇದೆಯೆಂದು ಹೇಳಿದರು. ಜಿ.ಪಂ. ಸದಸ್ಯೆ ಯಾಲದಾಳು ಪದ್ಮಾವತಿ ಮಾತನಾಡಿ, ಕಾರ್ಯಕರ್ತರ ಶ್ರಮದಿಂದ ನಾವುಗಳು ಆಯ್ಕೆಯಾಗಿ ದ್ದೇವೆ. ಜಿ.ಪಂ.ಗೆ ಅನುದಾನ ಕಡಿಮೆ ಬರುತ್ತಿದೆ, ಆದರೂ ಎಲ್ಲಾ ಗ್ರಾ.ಪಂ. ಗಳಿಗೂ ಸಮಾನಾವಕಾಶದೊಂದಿಗೆ ಅಭಿವೃದ್ಧಿಗೆ ಪ್ರಯತ್ನಿಸುವದಾಗಿ ಹೇಳಿದರು. ತಾ.ಪಂ. ಸದಸ್ಯ ಮುದ್ದಂಡ ರಾಯ್ ಪೊನ್ನಪ್ಪ ಮಾತನಾಡಿ, ತಾ.ಪಂ.ಗೆ ಒಂದು ಕೋಟಿ ಅನುದಾನ ಬಂದಿದ್ದು, ಮೂರು ಗ್ರಾ.ಪಂ.ಗೆ 3 ಲಕ್ಷದಂತೆ ಹಂಚಿದರೂ ಸಾಕಾಗದು, ಸಮಸ್ಯೆಗಳಿರುವ ಗ್ರಾಮಗಳಿಗೆ ಆದ್ಯತೆ ನೀಡುವದಾಗಿ ಹೇಳಿದರು. ಗ್ರಾ.ಪಂ. ಸದಸ್ಯ ಬಿ.ಎನ್. ರಮೇಶ್ ಸುವರ್ಣ ಮಾತನಾಡಿ, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಆಗಬೇಕು. ಅವಶ್ಯಕತೆ ಇರುವ ಕೆಲಸಗಳಿಗೆ ಆದ್ಯತೆ ಮೇರೆಗೆ ಅನುದಾನ ಒದಗಿಸಬೇಕೆಂದು ಸಲಹೆ ಮಾಡಿದರು.
ಸ್ಥಾನೀಯ ಸಮಿತಿ ಅಧ್ಯಕ್ಷ ಕುಂಬುಗೌಡನ ಮಧುಗೋಪಾಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ವಿಮಲ, ಮಾಜಿ ಸದಸ್ಯ ತಿಮ್ಮಯ್ಯ, ಹಿರಿಯರಾದ ಪಡೇಟ್ಟಿರ ಉತ್ತಯ್ಯ ಇನ್ನಿತರರಿದ್ದರು. ಸಮಿತಿ ಪದಾಧಿಕಾರಿ ಗಳಾದ ಕಿಶೋರ್ ಸ್ವಾಗತಿಸಿದರೆ, ಭಾಗ್ಯ ಹಾಗೂ ವಿಮಲ ಪ್ರಾರ್ಥಿಸಿದರು. ತಂಬುಕುತ್ತಿರ ಮಧು ಮಂದಣ್ಣ ನಿರೂಪಿಸಿದರು.