ಶ್ರೀಮಂಗಲ, ಸೆ. 13 : ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶದಿಂದ ರಾಜ್ಯದಾದ್ಯಂತ ಭುಗಿಲೆದ್ದಿರುವ ರೈತರ ಹೋರಾಟಕ್ಕೆ ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೋ) ಸಂಘಟನೆ ಬೆಂಬಲ ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ಮಹಿಳೆಯರಾದಿಯಾಗಿ ಸಾಂಪ್ರದಾಯಿಕ ಉಡುಪಿನಲ್ಲಿ ಕಾರ್ಯಕರ್ತರೊಂದಿಗೆ ಮಂಡ್ಯಕ್ಕೆ ತೆರಳಿ ಪ್ರತಿಭಟನೆಯನ್ನು ನಡೆಸಲಾಗಿದೆ ಎಂದು ಯುಕೋ ಸಂಚಾಲಕ ಮಂಜು ಚಿಣ್ಣಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ.10 ರಂದು ವಿಶೇಷ ಬಸ್ಗಳ ಮೂಲಕ, ಕೊಡಗಿನಿಂದ ತೆರಳಿದ ನೂರಾರು ಕೊಡವರನ್ನು, ಬೆಂಗಳೂರು ಹಾಗೂ ಮೈಸೂರಿನ ಕಾರ್ಯಕರ್ತರು ಮ್ಯಸೂರಿನ ಕೊಡವ ಸಮಾಜದಲ್ಲಿ ಬರಮಾಡಿಕೊಂಡರು. ಆನಂತರ ಹಲವು ವಾಹನಗಳಲ್ಲಿ ಮಂಡ್ಯಕ್ಕೆ ತೆರಳಿದ ಕಾರ್ಯಕರ್ತರು ಮೊದಲಿಗೆ ಕೃಷ್ಣರಾಜಸಾಗರ ಅಣೆಕಟ್ಟೆಗೆ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದಾಗ, ಬೃಹತ್ ಸಂಖ್ಯೆಯಲ್ಲಿದ್ದ ಪೊಲೀಸರು ಕಾರ್ಯಕರ್ತರನ್ನು ತಡೆದರು. ಈ ಸಂದರ್ಭ ರಾಜ್ಯ ರೈತಸಂಘದ ಮುಖಂಡ ಹಾಗೂ ಪಾಂಡವಪುರÀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ನಂಜುಂಡೇಗೌಡರ ನೇತೃತ್ವದಲ್ಲಿ ನೂರಾರು ರೈತರು ಯುಕೋ ಕಾರ್ಯಕರ್ತರನ್ನು ಬರಮಾಡಿ ಕೊಂಡರು ಎಂದು ಅವರು ತಿಳಿಸಿದರು.
ವ್ಯಾಜ್ಯದಿಂದ ಅಥವಾ ಹೋರಾಟದಿಂದ ಕಾವೇರಿ ನದಿಯು ತುಂಬುವದಿಲ್ಲ, ಕಾವೇರಿ ತುಂಬ ಬೇಕಾದರೆ ಕೊಡಗಿನಲ್ಲಿ ಸಮೃದ್ಧವಾಗಿ ಮಳೆಯಾಗಬೇಕಾಗಿದೆ ಆದರೆ ಕೊಡಗಿಗೆ ಮಳೆಯಾಗಲು ಪೂರಕವಾದ ಪರಿಸರವೇ ಕೊಡಗಿನಲ್ಲಿ ಇಲ್ಲದಂತಾಗಿದೆ. ಎಲ್ಲಾ ಪರಿಸರವನ್ನು ಸರ್ಕಾರದ ಮೇಲುಸ್ತು ವಾರಿಯಲ್ಲೇ ನಾಶಪಡಿಸಲಾಗಿದೆ ಎಂದು ದೂರಿದರು. ಕೊಡಗಿನ ಬಗ್ಗೆ ಸರ್ಕಾರಗಳು ಗಮನ ಹರಿಸಿದಲ್ಲಿ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದು ಮಂಡ್ಯದ ರೈತ ಮುಖಂಡರಿಗೆ ಮನವರಿಕೆ ಮಾಡಿರುವದಾಗಿ ಮಂಜು ಚಿಣ್ಣಪ್ಪ, ತಿಳಿಸಿದರು.
ಪ್ರತಿಭಟನೆಯಲ್ಲಿ, ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ, ರೈತ ಮುಖಂಡ ನಂಜುಂಡೇಗೌಡ, ಲೋಪಮುದ್ರ ಮೆಡಿಕಲ್ ಸೆಂಟರ್ನ ಮುಖ್ಯಸ್ಥರಾದ ಡಾ. ಮುಕ್ಕಾಟಿರ ಅಮೃತ್ ನಾಣಯ್ಯ, ಜಮ್ಮಡ ಗಣೇಶ್ ಅಯ್ಯಣ್ಣ, ಪಟ್ಟಡ ಜಯಕುಮಾರ್, ಅಪ್ಪನೆರವಂಡ ಮನೋಜ್ ಮಂದಪ್ಪ, ಕೋಡಿರ ಸುಧೀರ್, ಚಿರಿಯಪಂಡ ಸುಬ್ರಮಣಿ, ಚೆಕ್ಕೇರ ಬೋಪಣ್ಣ, ಮಾತಂಡ ಚಂಗಪ್ಪ,, ಮೇಕೇರಿರ ಶಶಿ, ರತ್ನ, ಮಚ್ಚೇಟಿರ ಲತಾ ಉದಯ್, ಕಾಂಡೇರ ರೂಪ, ಕಡೇಮಾಡ ರೇಖ ದಿನೇಶ್, ಕೊಪ್ಪೀರ ಪ್ರಸನ್ನ ಉತ್ತಪ್ಪ, ಅಂಜಪರವಂಡ ಅನಿತಾ ತಿಮ್ಮಯ್ಯ ಬಲ್ಲಚಂಡ ಗೌತಮ್, ಮಲ್ಲಪನೆರ ಮಧು, ಮದ್ರಿರ ಗಿರಿಶ್ ಗಣಪತಿ, ಬೊಳ್ಯಂಗಡ ಬೋಪಣ್ಣ, ಕಡೇಮಾಡ ಶರತ್, ಪೂವಣ್ಣ, ತಿಮ್ಮಯ್ಯ, ಪುಟ್ಟಂಗಡ ಉತ್ತಪ್ಪ, ಚೆಯ್ಯಂಡ ಸತ್ಯ, ಅಪ್ಪಾರಂಡ ವೇಣು ಪೊನ್ನಪ್ಪ, ಮಾದೇಡಿರ ಜೀವನ್, ಅಪ್ಪಚ್ಚಿರ ನಂದ, ಕ್ಯಾಲೇಟಿರ ಪವಿತ್, ಸೇರಿದಂತೆ ನೂರಾರು ಕಾರ್ಯ ಕರ್ತರು ಭಾಗವಹಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ಮಾದೇಟಿರ ತಿಮ್ಮಯ್ಯ, ಅಂಜಪರವಂಡ ರಘು ತಿಮ್ಮಯ್ಯ, ಕಾಟಿಮಾಡ ಗಿರಿ ಅಯ್ಯಪ್ಪ, ನಂದೇಟಿರ ರವಿ ಸುಬ್ಬಯ್ಯ, ನೆಲ್ಲಮಕ್ಕಡ ಮಾದಯ್ಯ, ಹಾಜರಿದ್ದರು.