ಮಡಿಕೇರಿ, ಜೂ. 9: ಮಂಚಳ್ಳಿ ವಾರ್ಡ್‍ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿರುವದರಿಂದ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ಬಿಸಿಯೂಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನೋಂದಾಯಿತ 20 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದು, ಇವರಿಗೆ ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಅವರ ಉದ್ದೇಶದ ಮೇರೆಗೆ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಳೇ ವಿದ್ಯಾರ್ಥಿನಿಯರಾದ ಎಂ.ಎಂ. ದೀಕ್ಷಿತಾ, ಆರ್. ರಂಜಿತ, ಆರ್. ಸೌಮ್ಯ, ಆರ್. ಪ್ರಜಿತ ಕಲರ್ ಪೇಪರ್ ಬಳಸಿ ಬಂಟಿಂಗ್ಸ್, ಗ್ರೀಟಿಂಗ್ಸ್, ನೇಚರ್ ಕಾರ್ಡ್, ಫ್ಲವರ್ ಮೇಕಿಂಗ್, ಪ್ರೀ ಹ್ಯಾಂಡ್ ಡ್ರಾಯಿಂಗ್‍ಗಳನ್ನು ಕಲಿಸಿಕೊಟ್ಟರು. ಮುಖ್ಯೋಪಾಧ್ಯಾಯ ಕೆ.ಎಂ. ಸೋಮಯ್ಯ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಪ್ರತಿಭಾಯುತ ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗಪಡಿಸಿಕೊಂಡರು.