*ಗೋಣಿಕೊಪ್ಪ, ಜ. 2: ಅಮ್ಮತ್ತಿಯಲ್ಲಿ ನಡೆದ ಮಿಲನ್ಸ್ ಪುಟ್ಬಾಲ್ ಕಪ್ 2016 ಹೆಚ್. ಡಬ್ಲ್ಯೂ. ಎ. ತೆಲಪಾಡಿ ಮಂಗಳೂರು ತಂಡ ತನ್ನ ಮುಡಿಗೇರಿಸಿಕೊಂಡಿದೆ.ಅಮ್ಮತ್ತಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ 9ನೇ ವರ್ಷದ ಮಿಲನ್ಸ್ ಫುಟ್ಬಾಲ್ ಕಪ್ ಮೂರು ದಿನಗಳ ಕಾಲ ನಡೆಯಿತು. ಹೆಚ್.ಡಬ್ಲೂ.ಎ. ತಲಪಾಡಿ ಮಂಗಳೂರು ತಂಡ ಮಿಲನ್ಸ್ ಎ ತಂಡದ ವಿರುದ್ಧ 4-2 ಗೋಲುಗಳಿಂದ ಜಯ ಸಾಧಿಸಿದೆ.

ಅತ್ಯುತ್ತಮ ಆಟಗಾರರಾಗಿ ಮಿಲನ್ಸ್ ತಂಡದ ಸುದೀಪ್, ಯುವ ಆಟಗಾರನಾಗಿ ಕಣ್ಣನ್, ಗೋಲ್ ಕೀಪರ್ ಆಗಿ ರಾಕಿ ಬಾಜನರಾದರು. ಅತ್ಯುತ್ತಮ ಗೋಲು ದಾಖಲಿಸಿದ ಆಟಗಾರರಾಗಿ ತಲಪಾಡಿ ತಂಡದ ಕೌಶಿಕ್, ಪಂದ್ಯಪುರುಷೋತ್ತಮ ಆಟಗಾರನಾಗಿ ಕೌಶಿಕ್, ಅತ್ಯುತ್ತಮ ಸ್ಟೈಕರ್ ರಿಜ್ವಾನ್, ರಕ್ಷಣಾ ಆಟಗಾರನಾಗಿ ಪ್ರತಾಪ್, ಸರಣಿ ಪುರುಷೊತ್ತಮನಾಗಿ ಮಿಲನ್ಸ್ ತಂಡದ ಅಬೂಬಕ್ಕರ್ ಭಾಜನರಾದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಪ್ರತಿಭಾವಂತ ಕ್ರೀಡಾಪಟುಗಳು ರಾಜಕೀಯದಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಜಿಲ್ಲೆ ಕ್ರೀಡೆಯ ತವರೂರು. ಹಾಕಿಗೆ ನೀಡುವ ಪ್ರೋತ್ಸಾಹ ಫುಟ್ಬಾಲಿಗೂ ದೊರಕಬೇಕು ಎಂದರು.

ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ, ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ ಕೊಡಗು ಜಿಲ್ಲಾ ಫುಟ್ಬಾಲ್ ಒಕ್ಕೂಟದ ಅಧ್ಯಕ್ಷ ಮೋಹನ್ ಅಯ್ಯಪ್ಪ, ವೀರಾಜಪೇಟೆ ತಾಲೂಕು ಬಿ.ಜೆ.ಪಿ ಕಾರ್ಯದರ್ಶಿ ಸುವಿನ್ ಗಣಪತಿ, ಪಾಲಿಬೆಟ್ಟ ಸ್ಥಾನೀಯ ಸಮಿತಿ ಅಧ್ಯಕ್ಷ ಟಿ.ಜಿ ವಿಜೇಶ್ ಅಮ್ಮತ್ತಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಟ್ಟಂಡ ಕೃಷ್ಣ, ಆರ್.ಎಂ.ಸಿ ಮಾಜಿ ಅಧ್ಯಕ್ಷ ಮಾಚಿಮಂಡ ವಸಂತ್, ಮಿಲನ್ಸ್ ಯೂತ್ ಕ್ಲಬ್ ಅಧ್ಯಕ್ಷ ಲಿಜೇಶ್ ಉಪಸ್ಥಿತರಿದ್ದರು.