ಸೋಮವಾರಪೇಟೆ, ಜು. 2: ಇಲ್ಲಿಗೆ ಸಮೀಪದ ಬಿಳಿಗೇರಿ ಗ್ರಾಮದ ಮನೆಯೊಂದರ ಆವರಣದಲ್ಲಿ ನಿಲ್ಲಿಸಿದ್ದ ಮಾರುತಿ ವ್ಯಾನ್ ಮೇಲೆ ಬೃಹತ್ ಗಾತ್ರದ ಮರ ಬಿದ್ದು ವ್ಯಾನ್ ಸಂಪೂರ್ಣ ನಜ್ಜುಗುಜ್ಜಾಗಿರುವ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಬಿಳಿಗೇರಿ ಗ್ರಾಮದ ಗೌಡಂಡ ಶಮಂತ್ ಎಂಬವರು ಎಂದಿನಂತೆ ತಮ್ಮ ಮಾರುತಿ ಓಮಿನಿ ವ್ಯಾನ್‍ನ್ನು ಮನೆಯ ಸಮೀಪದ ಬೈರಾಜಂಡ ಮಿಟ್ಟು ಅವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದರು. ನಿನ್ನೆ ರಾತ್ರಿ 10.30ರ ವೇಳೆಗೆ ತೀವ್ರ ಮಳೆಗಾಳಿಯಿಂದಾಗಿ ಬೃಹತ್ ಗಾತ್ರದ ಮರ ವ್ಯಾನ್ ಮೇಲೆ ಬಿದ್ದ ಪರಿಣಾಮ, ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಸಾವಿರಾರು ರೂ. ನಷ್ಟ ಸಂಭವಿಸಿದೆ.