ಶ್ರೀಮಂಗಲ, ಜೂ. 19: ದಕ್ಷಿಣ ಕೊಡಗಿನ ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ತಿತಿಮತಿ ಅರಣ್ಯಕ್ಕೆ ಬಿಡಲಾಯಿತು.

ಹೈಸೊಡ್ಲೂರು ಗ್ರಾಮದ ಮಂಡಂಗಡ ರವಿ ಅವರ ಹಳೆಯ ಮನೆಯೊಳಗೆ ಇದ್ದ 13 ಅಡಿ ಉದ್ದ, 7 ಕೆ.ಜಿ. ತೂಕದ ಕಾಳಿಂಗ ಸರ್ಪವನ್ನು ಪೊನ್ನಂಪೇಟೆ ನಿವಾಸಿ ಸ್ನೇಕ್ ನವೀನ್ (ರಾಕಿ) ಹಿಡಿದು ಸುರಕ್ಷಿತವಾಗಿ ತಿತಿಮತಿ ಅರಣ್ಯಕ್ಕೆ ಬಿಟ್ಟರು.

ಹಾವನ್ನು ಕಂಡು ರವಿ ಮನೆಯ ಅಕ್ಕ- ಪಕ್ಕದವರು ಕುತೂಹಲದಿಂದ ವೀಕ್ಷಿಸಿದರು. ಸ್ನೇಕ್ ನವೀನ್ ಈವರೆಗೆ 932 ಹಾವುಗಳನ್ನು ರಕ್ಷಿಸಿದ್ದು, ಇದರಲ್ಲಿ 15 ಅಡಿ ಉದ್ದ, 20 ಕೆ.ಜಿ.ಯ ಇಂಡಿಯನ್ ರಾಕ್ ಪೈತಾನ್ ಸಹ ಸೇರಿದೆ. -ಹರೀಶ್ ಮಾದಪ್ಪ.