ನಾಪೆÇೀಕ್ಲು, ಆ. 14: ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ ಕೃಷಿಗೆ ಪೆÇ್ರೀತ್ಸಾಹದ ಕೊರತೆ ಇದೆ. ಜಿಲ್ಲೆಯ ರೈತರು ಭತ್ತದ ಕೃಷಿಯಿಂದ ವಿಮುಖರಾಗಿದ್ದಾರೆ. ಯುವಜನರು ಶಿಕ್ಷಣ ಪೂರೈಸಿ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಕೃಷಿಯನ್ನು ಕಡೆಗಣಿಸದೇ ಕೃಷಿಯಲ್ಲಿ ತೊಡಗಿಸಿಕೊಳ್ಳುವದರಿಂದ ಆರೋಗ್ಯ ಉತ್ತಮವಾಗುತ್ತದೆ ಹಾಗೂ ನಾಡಿನ ಪ್ರಗತಿಯಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಹೇಳಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ನಾಪೆÇೀಕ್ಲು ಕೊಡವ ಸಮಾಜ, ಕ್ರೀಡಾ ಸಾಂಸ್ಕøತಿಕ ಮತ್ತು ಮನೋರಂಜನಾ ಕೂಟ ಹಾಗೂ ಬಿದ್ದಾಟಂಡ ಕುಟುಂಬದವರ ಆಶ್ರಯದಲ್ಲಿ ಇಲ್ಲಿನ ಬಿದ್ದಾಟಂಡ ಬೋಪಯ್ಯ ಮತ್ತು ರಾಥಾ ಗಣಪತಿ ಅವರ ಗದ್ದೆಯಲ್ಲಿ ಏರ್ಪಡಿಸಲಾಗಿದ್ದ ಬೇಲ್ ನಮ್ಮೆ 2016ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಮಾತನಾಡಿ, ಕೊಡವ ಜಾನಪದ ಸಂಸ್ಕøತಿಯ ಭಾಗವಾದ ನಾಟಿ ಓಟ ಇತ್ತೀಚಿನ ದಿನಗಳಲ್ಲಿ ಮರೆಯಾಗಿದೆ. ಹಿಂದೆ ಗದ್ದೆಗಳಲ್ಲಿ ನಾಟಿ ಓಟ ಮಾತ್ರ ನಡೆಯುತ್ತಿತ್ತು. ಈಗ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೆಸರು ಗದ್ದೆಯಲ್ಲಿ ವೈವಿಧ್ಯಮಯ ಕ್ರೀಡಾಕೂಟಗಳು ಜರುಗಿ ವೈವಿಧ್ಯತೆ ಪಡೆದುಕೊಂಡಿದೆ. ಇದರ ಪ್ರಯೋಜನ ಮಕ್ಕಳಿಗೆ, ಯುವಜನರಿಗೆ ಲಭಿಸಬೇಕು. ಚಟುವಟಿಕೆಗಳು ಕ್ರೀಡೆಗೆ ಮಾತ್ರ ಸೀಮಿತವಾಗದೆ ಉದ್ದೇಶ ಸಫಲತೆ ಕಾಣಬೇಕು. ಕೃಷಿ ಚಟುವಟಿಕೆಗಳ ಬಗ್ಗೆ ಮಕ್ಕಳು ಅರಿವು ಹೊಂದುವಂತಾಗ ಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿ, ಜಿಲ್ಲೆಯಲ್ಲಿ

(ಮೊದಲ ಪುಟದಿಂದ) ಇತ್ತೀಚಿನ ದಿನಗಳಲ್ಲಿ ಭತ್ತ ಬೆಳೆಯುವದು ಕಡಿಮೆಯಾಗುತ್ತಿದೆ. ಭತ್ತ ಬೆಳೆಗೆ ಉತ್ತೇಜನ ನೀಡುವಲ್ಲಿ ಭತ್ತಕ್ಕೆ ಹೆಚ್ಚಿನ ಬೆಂಬಲ ಬೆಲೆ ನೀಡುವಂತಾಗಬೇಕು. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನವಾಗಬೇಕಾಗಿದೆ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಮಾದೇಟಿರ ಬೆಳ್ಯಪ್ಪ ಕೊಡವ ಆಚಾರ-ವಿಚಾರ, ಪದ್ಧತಿ-ಪರಂಪರೆ ಪ್ರತಿಯೊಂದು ಕೃಷಿ ಆಧಾರಿತವಾಗಿದ್ದು, ಇತ್ತೀಚಿನ ದಿನಗಳಲ್ಲಿ ಯುವಜನಾಂಗದಲ್ಲಿ ಕೃಷಿ ಬಗ್ಗೆ ಆಸಕ್ತಿ ಕುಂಠಿತಗೊಂಡಿರುವದರಿಂದ ಕೃಷಿ ಹಬ್ಬವನ್ನು ನಡೆಸಲಾಗುತ್ತಿದೆ ಎಂದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ಮಾತನಾಡಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಕೊಳಕೇರಿ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯೆ ಪುಲ್ಲೇರ ಪದ್ಮಿನಿ, ಬಿದ್ದಾಟಂಡ ಕುಟುಂಬದ ಪಟ್ಟೇದಾರ ಬಿ.ಸಿ. ಪೊನ್ನಪ್ಪ, ಬಿದ್ದಾಟಂಡ ಬೋಪಯ್ಯ ಮತ್ತಿತರರಿದ್ದರು. ಬಡ್ಡೀರ ಡಯಾನ ಪ್ರಾರ್ಥನೆ, ಕೊಡವ ಸಾಂಸ್ಕøತಿಕ ಮತ್ತು ಮನೊರಂಜನಾ ಕೂಟದ ಸದಸ್ಯ ಮಂಡೀರ ರಾಜಪ್ಪ ಚಂಗಪ್ಪ ಸ್ವಾಗತಿಸಿ ಕಲ್ಯಾಟಂಡ ರಮೇಶ್ ಚಂಗಪ್ಪ ವಂದಿಸಿದರು.

ನಂತರ ಅಗೆ ತೆಗೆಯುವದು, ನಾಟಿ ನೆಡುವ ತರಬೇತಿ ಕಾರ್ಯಕ್ರಮವಿತ್ತು. ನಾಟಿ ಓಟ ಸ್ಪರ್ಧೆ, ಹಗ್ಗಜಗ್ಗಾಟ, ನಿಧಿ ಶೋಧನೆ ಸ್ಪರ್ಧೆ ನಡೆಯಿತು.

ಕಾರ್ಯಕ್ರಮವನ್ನು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಜೋಡಿ ಎತ್ತಿನ ಮೂಲಕ ಉಳುಮೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

-ಪಿ.ವಿ. ಪ್ರಭಾಕರ್