ಮಡಿಕೇರಿ, ನ. 16: ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ಕೊಡಗು ಶಾಖಾ ವತಿಯಿಂದ ಪ್ರಪಂಚದಲ್ಲಿಯೇ ದ್ವಿತೀಯ ಬಾರಿಗೆ ದ್ವಾದಶ ಮಹಾ ಕಾಳ ಸರ್ಪಯಾಗವನ್ನು ಲೋಕ ಕಲ್ಯಾಣಕ್ಕಾಗಿ ಮತ್ತು ಕೊಡಗಿನ ಅಭಿವೃದ್ಧಿ ಮತ್ತು ಏಳಿಗೆಗಾಗಿ ತಾ. 20ರಂದು ಬೆಳಿಗ್ಗೆ 7 ಗಂಟೆಯಿಂದ ವೀರಾಜಪೇಟೆ ಬಳಿಯ ಕಾಕೋಟುಪರಂಬುವಿನ ಮೈದಾನದಲ್ಲಿ ಏರ್ಪಡಿಸಲಾಗಿದೆ.

ಯಾಗವನ್ನು ಮುದ್ರಾ ಮತ್ತು ಮಂತ್ರ ತಜ್ಞರು, ಝಿ ಟಿ.ವಿ. ಮತ್ತು ಪಬ್ಲಿಕ್ ಟಿ.ವಿ. ಖ್ಯಾತಿಯ ಗುರೂಜಿ ಲಕ್ಷ್ಮಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆಸಲಾಗುವದು. ಯಾಗಕ್ಕೆ ಭಾಗವಹಿಸುವ ಸರ್ವರಿಗೂ ಉಚಿತ ಪ್ರವೇಶ. ಸಾಂಪ್ರದಾಯಿಕ ಉಡುಪು ಅಥವಾ ಸೀರೆ ಹೆಂಗಸರಿಗೆ, ಗಂಡಸರಿಗೆ ಪಂಚೆ ಶಲ್ಯ ಯಾಗಕ್ಕೆ ಆಗಮಿಸುವ ಭಕ್ತಾದಿಗಳ ಉಡುಗೆ ಶೈಲಿಯಾಗಿದ್ದು, ಸರ್ವರಿಗೂ ಈ ಯಾಗದಲ್ಲಿ ಭಾಗವಹಿಸಿ ಕಾಳಸರ್ಪ ದೋಷದಿಂದ ಮುಕ್ತಿ ಹೊಂದಬಹುದು ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ.