ಭಾಗಮಂಡಲ, ಸೆ. 27: ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರದಲ್ಲಿ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಎರಡೂ ರಾಜ್ಯಗಳ ಜನತೆಯ ಮಧ್ಯೆ ಉಂಟಾಗಿರುವ ಮನಃಸ್ತಾಪ ಮತ್ತು ಕಾವೇರಿ ನೀರಿನ ಸಮಸ್ಯೆ ಕೂಡಲೇ ಇತ್ಯರ್ಥಗೊಳ್ಳುವಂತೆ ಆಶಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇಶದೆಲ್ಲೆಡೆ ಶಾಂತಿ - ಸೌಹಾರ್ದತೆ ನೆಲೆಗೊಳ್ಳಲಿ, ದೇಶವನ್ನು ಕಾಯುತ್ತಿರುವ ಯೋಧರಿಗೆ ಆಯುರಾರೋಗ್ಯ ದೊರೆಯಲಿ ಎಂದು ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ರುದ್ರಹೋಮ, ಚಂಡಿಕಾ ಹೋಮ ನೆರವೇರಿಸಿ ಬಳಿಕ ಕಾವೇರಿ ಉಗಮ ಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ.ಕೆ. ಮಂಜುನಾಥ್ ಕುಮಾರ್, ಮಾಜಿ ಜಿಲ್ಲಾಧ್ಯಕ್ಷ ಬಿ.ಟಿ. ಪ್ರದೀಪ್, ಸುನಿಲ್ ಪತ್ರವೋ, ಕೆದಂಬಾಡಿ ಸುರೇಂದ್ರ, ರಮೇಶ್, ರಘುನಾಥ್, ಹರ್ಷ, ಕುದುಪಜೆ ಪ್ರಕಾಶ್, ಅಬ್ದುಲ್ ಲತೀಫ್, ಹ್ಯಾರೀಶ್, ಮಂಡ್ಯ ಹಾಗೂ ಬೆಂಗಳೂರಿನ ಮಲ್ಲಿಗಮ್ಮ, ಮಹಾಲಿಂಗು, ಶುಭಾದಾಯಿತ್, ರಮೇಶ್ ಇನ್ನಿತರರು ಇದ್ದರು. ಪೂಜಾ ಕಾರ್ಯಕ್ರಮವು ಮಡಿಕೇರಿಯ ಕೃಷ್ಣೋಪಾಧ್ಯಾಯ ಹಾಗೂ ಭಗಂಡೇಶ್ವರ ದೇವಾಲಯದ ಹರೀಶ್ ಭಟ್ ಅವರ ನೇತೃತ್ವದಲ್ಲಿ ನಡೆಯಿತು.