ಮಡಿಕೇರಿ, ಸೆ. 2: ಇತ್ತೀಚೆಗೆ ಮಡಿಕೇರಿಯ ಬ್ರೈನೋ ಬ್ರೈನ್ ಅಬಾಕಸ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ನಡೆಯಿತು. ಸುಮಾರು 24 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಬ್ರೈನೋ ಬ್ರೈನ್ ಸಂಸ್ಥೆಯ ಕರ್ನಾಟಕ ವಲಯ ನಿರ್ದೇಶಕ ರಾಮಕೃಷ್ಣ ಮತ್ತು ಸಂಸ್ಥೆಯ ಮುಖ್ಯಸ್ಥೆ ಮಾಪಂಗಡ ಕವಿತಾ ಕರುಂಬಯ್ಯ ಉಪಸ್ಥಿತರಿದ್ದರು.

ಮಕ್ಕಳ ಮುಂದಿನ ಶೈಕ್ಷಣಿಕ ಮಾರ್ಗ ನಿರ್ಧರಿಸಲು ಅವರಿಗೆ ಸ್ವಾತಂತ್ರ್ಯ ನೀಡಿ ಪ್ರೋತ್ಸಾಹ ನೀಡಬೇಕು. ಅವರ ಸ್ವಪ್ನಕ್ಕೆ ರೆಕ್ಕೆ ಒದಗಿಸಿ ಎಂದ ಅತಿಥಿಗಳು ಹೇಳಿದರು.