ಸೋಮವಾರಪೇಟೆ,ಆ.15: ಇಲ್ಲಿನ ಬ್ರಾಹ್ಮಣ ಸಮಾಜದ ವಾರ್ಷಿಕ ಮಹಾಸಭೆ ಸೋಮೇಶ್ವರ ದೇವಾಲಯದಲ್ಲಿ ಜರುಗಿತು. 2019ಕ್ಕೆ ದೇವಾಲಯದ ಶತಮಾನೋತ್ಸವ ಆಚರಿಸಲಿದ್ದು, ಈ ಪ್ರಯುಕ್ತ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಸಮಾಜ ಹಾಗೂ ದೇವಾಲಯದ ಒಳಿತಿಗಾಗಿ ಶ್ರಮಿಸು ತ್ತಿರುವ ದಂಪತಿಗಳಾದ ಶ್ಯಾಂಸುಂದರ್, ಪಂಕಜ ಶ್ಯಾಂಸುಂದರ್ ಅವರುಗಳನ್ನು ಸಮಾಜದ ಮಾಜಿ ಅಧ್ಯಕ್ಷ ಎಚ್.ಆರ್. ದಾಮೋದರ್ ಹಾಗೂ ಗಾಯತ್ರಿ ದಾಮೋದರ್ ಸನ್ಮಾನಿಸಿ ದರು.
ಸೈಕ್ಲಿಂಗ್ನಲ್ಲಿ ಸಾಧನೆ ಮಾಡುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿ ನಿತಾಂತ್ ಧನಂಜಯ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕಾರಿ ಮಂಡಳಿಗೆ ವಿಜೇತ್ ಹಾಗೂ ಮಧುಸೂದನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳಲಾಯಿತು.
ಅಧ್ಯಕ್ಷ ಎಸ್.ಆರ್.ಸೋಮಯ್ಯ, ಕಾರ್ಯದರ್ಶಿ ಶ್ರೀಕಾಂತ್, ಪದಾಧಿಕಾರಿಗಳಾದ ರಾಂಪ್ರಸಾದ್, ರವಿಶಂಕರ್, ಚಂದ್ರಶೇಖರಯ್ಯ, ಚಿರಂಜೀವಿ, ಮಂಜುನಾಥ್ ಪ್ರಸಾದ್, ಕಮಲಾಕ್ಷಮ್ಮ ದೊರೆಸ್ವಾಮಿ, ಸುಮ ಆನಂದ್, ವಿದ್ಯಾ ಸೋಮೇಶ್, ಶ್ರೀನಿವಾಸ್, ಎಸ್.ಎ.ಮಧುಸೂದನ್, ನಾಣಿ, ಮುಂತಾದವರು ಭಾಗವಹಿಸಿ ದ್ದರು.