ಪೊನ್ನಂಪೇಟೆ, ನ. 21: ಪೊನ್ನಂಪೇಟೆ ನಗರದ ರಸ್ತೆ ಬದಿಯಲ್ಲಿ ಶಾಲೆಗಳಿದ್ದು, ವಿದ್ಯಾರ್ಥಿಗಳ ಓಡಾಟಕ್ಕೆ ರಸ್ತೆಯಲ್ಲಿ ಉಂಟಾಗುತ್ತಿದ್ದ ಅಡಚಣೆ ಹಾಗೂ ಅಪಘಾತವನ್ನು ಅರಿತ ಪೊನ್ನಂಪೇಟೆ ನಾಗರಿಕ ವೇದಿಕೆ ಪೊನ್ನಂಪೇಟೆ ಮುಖ್ಯರಸ್ತೆಯ ಪ್ರಾಥಮಿಕ ಶಾಲೆಯ ಮುಂಭಾಗ ದಲ್ಲಿ 2 ಬ್ಯಾರಿಕೇಡ್‍ಗಳನ್ನು ಪೊಲೀಸ್ ಇಲಾಖೆಗೆ ನೀಡಿದೆ.

ಈ ನಿಟ್ಟಿನಲ್ಲಿ ನೂತನವಾಗಿ ಗೋಣಿಕೊಪ್ಪಲು ರೋಟರಿ ಸಂಸ್ಥೆಯ ವತಿಯಿಂದ ಉದಾರ ವಾಗಿ ನಿರ್ಮಿಸಿದ 2 ಬ್ಯಾರಿಕೇಡ್ ಗಳನ್ನು ರೋಟರಿ ಸಂಸ್ಥೆಯ ಗವರ್ನರ್ ಡಾ. ನಾಗಾರ್ಜುನ ನಾಗರಿಕ ವೇದಿಕೆ ಅಧ್ಯಕ್ಷರು ಹಾಗೂ ರೋಟರಿ ಸಂಸ್ಥೆಯ ಸದಸ್ಯ ಪಿ.ಬಿ. ಪೂಣಚ್ಚ ಅವರ ಸಮ್ಮುಖದಲ್ಲಿ ಠಾಣಾಧಿಕಾರಿ ಜಯರಾಂ ಅವರಿಗೆ ಹಸ್ತಾಂತರಿಸಲಾಯಿತು. ನಾಗರಿಕರು ಹಾಗೂ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ರಸ್ತೆ ಸುರಕ್ಷತೆಯ ಬಗ್ಗೆ ಸಹಕರಿಸುವಂತೆ ವಿನಂತಿಸಿದರು. ಈ ಸಂದರ್ಭ ಗೋಣಿಕೊಪ್ಪಲು ರೋಟರಿ ಸಂಸ್ಥೆಯ ಅಧ್ಯಕ್ಷ ನರೇಂದ್ರ, ಕಾರ್ಯದರ್ಶಿ ನವೀನ್, ಚೇನಂಡ ಸುಮಿ ಸುಬ್ಬಯ್ಯ, ಚಿರಿಯಪಂಡ ಇಮ್ಮಿ ಉತ್ತಪ್ಪ, ಪುತ್ತಾಮನೆ ಕುಮಾರಿ ಮತ್ತು ನಾಗರಿಕ ವೇದಿಕೆಯ ಸದಸ್ಯರು ಭಾಗವಹಿಸಿದ್ದರು.