ಮಡಿಕೇರಿ, ಸೆ. 1: ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಬೇಂಗೂರು (ಚೇರಂಬಾಣೆ) ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ, ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚಿಸಿದರು.

ರಸ್ತೆ ದುರಸ್ತಿ, ಕುಡಿಯುವ ನೀರಿನ ಸಮಸ್ಯೆ, ಪಿ.ಡಿ.ಓ. ಖಾಲಿ ಹುದ್ದೆ ಭರ್ತಿ ಬಗ್ಗೆ, ಬೇಂಗೂರು-ಎಮ್ಮೆಮಾಡು ಗ್ರಾಮದ ನಡುವೆ ಕಾವೇರಿ ನದಿಗೆ ದೋಣಿ ವ್ಯವಸ್ಥೆ ಮುಂತಾದ ಸಮಸ್ಯೆಗಳನ್ನು ಸದಸ್ಯರುಗಳು, ಗ್ರಾಮಸ್ಥರು ಸದಸ್ಯರ ಮುಂದಿಟ್ಟ್ಟರು.

ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಎಂ.ಪಿ.ಸುನೀಲ್ ಸುಬ್ರಮಣಿ ಅವರು ಈ ಗ್ರಾಮ ಪಂಚಾಯಿತಿಗೆ ವಿಧಾನ ಪರಿಷತ್‍ಗೆ ಆಯ್ಕೆಯಾದ ನಂತರ ಇದೇ ಮೊದಲ ಬಾರಿ ಭೇಟಿ ನೀಡುತ್ತಿದ್ದೇನೆ. ತನ್ನ ಕಾರ್ಯವ್ಯಾಪ್ತಿಯೊಳಗೆ ಪಂಚಾಯತ್ ರಾಜ್ ವ್ಯವಸ್ಥೆಯಡಿ ವಿಧಾನ ಸಭಾ ಶಾಸಕರೊಂದಿಗೆ ಸಮಸ್ಯೆಗಳನ್ನು ಆಯಾ ಪ್ರಾಧಿಕಾರಿಗಳ ಮೂಲಕ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು. ಕಾವೇರಿ ನದಿಗೆ ದೋಣಿ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸುವದಾಗಿ ತಿಳಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ. ಅಶೋಕ್, ಉಪಾಧ್ಯಕ್ಷೆ ಲಕ್ಷ್ಮಿ, ಗ್ರಾ.ಪಂ. ಸದಸ್ಯರು, ಪಿ.ಡಿ.ಓ. ಮಡಿಕೇರಿ ನಗರ ಸಭಾ ಸದಸ್ಯ ಪಿ.ಡಿ. ಪೆÇನ್ನಪ್ಪ ಮುಂತಾದವರು ಹಾಜರಿದ್ದರು.