ಶನಿವಾರಸಂತೆ, ಅ. 18: ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿ ಇರುವ ವಿಜಯ ವಿನಾಯಕ ದೇವಸ್ಥಾನದಲ್ಲಿ ಆದರ್ಶ ವಿಜಯ ವಿನಾಯಕ ಸೇವಾ ಸಮಿತಿ ವತಿಯಿಂದ ಗೌರಿ-ಗಣೇಶ ಪ್ರತಿಷ್ಠಾಪನೆಯ ಬೆಳ್ಳಿ ಹಬ್ಬದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಆಟೋಟ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಆಟೋಟ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕಾಲೋನಿಯ ವಿಜಯ ವಿನಾಯಕ ತಂಡ ಪ್ರಥಮ ಹಾಗೂ ನಾಗ ಮತ್ತು ತಂಡ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ವಿಜಯ ವಿನಾಯಕ ತಂಡ ಪ್ರಥಮ ಸ್ಥಾನಗಳಿಸಿತು.
ಪುರುಷರ ವಿಭಾಗದ ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಗುಂಡ ಪ್ರಥಮ, ಮನು ದ್ವಿತೀಯ. ಮಹಿಳೆಯರ ವಿಭಾಗದಲ್ಲಿ ರಾಣಿ ಪ್ರಥಮ ಹಾಗೂ ಮಮತಾ ದ್ವಿತೀಯ ಸ್ಥಾನ ಗಳಿಸಿದರು.
ಪುರುಷರ ಗೋಣಿಚೀಲ ಓಟ ಸ್ಪರ್ಧೆಯಲ್ಲಿ ಶಾಂ ಪ್ರಸಾದ್ ಪ್ರಥಮ, ಪುಟ್ಟ ದ್ವಿತೀಯ ಸ್ಥಾನಗಳಿಸಿದರು. ಮಹಿಳೆಯರ ರಂಗೋಲಿ ಸ್ಪರ್ಧೆಯಲ್ಲಿ ಶುಭಾ ಪ್ರಥಮ, ಶೋಭಾ ದ್ವಿತೀಯ ಹಾಗೂ ಶ್ವೇತ ತೃತೀಯ ಸ್ಥಾನಗಳಿಸಿದರು.
ವಿಜೇತರಿಗೆ ಗೌರಿ-ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಗುವದು ಎಂದು ಸೇವ ಸಮಿತಿ ತಿಳಿಸಿದೆ.