ಮಡಿಕೇರಿ, ಜೂ.10: ಬುಡಕಟ್ಟು ಜನರ ಸಮಸ್ಯೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಅಧಿಕಾರಿಗಳು ಮತ್ತು ಬುಡಕಟ್ಟು ಸಮುದಾಯದ ಮುಖಂಡರೊಂದಿಗೆ ತೀರ್ಮಾನ ಕೈಗೊಳ್ಳಲಾಗಿದೆ.

ಹಳ್ಳಿಗಟ್ಟು ಗ್ರಾಮದಲ್ಲಿ ವಾಸಿಸುತ್ತಿದ್ದ 108 ಕುಟುಂಬಗಳು ಬೇರೆ ಕಡೆ ಜಮೀನು ಗುರುತಿಸುವಂತೆ ಏಪ್ರಿಲ್, 12 ರ ಸಭೆಯಲ್ಲಿ ಸಚಿವರ ಮುಂದೆ ಬೇಡಿಕೆ ಇಟ್ಟ ಮೇರೆಗೆ ಜಿಲ್ಲಾಡಳಿತದ ವತಿಯಿಂದ ಕುಂದ ಗ್ರಾಮದಲ್ಲಿ ನಂ, 92/1 ರಲ್ಲಿ 6 ಎಕರೆ ಜಾಗವನ್ನು ನಿವೇಶನಕ್ಕಾಗಿ ಗುರುತಿಸಲಾಗಿದೆ.

ದೇವರಪುರ ಗ್ರಾ. ಪಂ. ವ್ಯಾಪ್ತಿಯ ಹೆಬ್ಬಾಲೆ-ದೇವರಪುರ ವ್ಯಾಪ್ತಿಯಲ್ಲಿ ವಾಸವಿರುವ 130 ಕುಟುಂಬಗಳಿಗೆ ಗ್ರಾಮ ಪಂಚಾಯತ್ ವತಿಯಿಂದ ಕುಡಿಯುವ ನೀರಿನ ಟ್ಯಾಂಕ್ ಮತ್ತು ಬೋರ್‍ವೆಲ್‍ಗಳನ್ನು ದುರಸ್ತಿ ಪಡಿಸಲಾಗಿದೆ.

ನ್ಯಾಯಾಲಯದ ತಡೆಯಾಜ್ಞೆ ಯನ್ನು ತೆರವುಗೊಳಿಸಲು ಮೇಲ್ಮನವಿ ಸಲ್ಲಿಸುವ ಸಂಬಂಧ ಕಾನೂನು ತಜ್ಞರನ್ನು ಭೇಟಿ ಮಾಡಿ ಪ್ರಕರಣದ ದಾಖಲಾತಿಗಳನ್ನು ಸಲ್ಲಿಸಲಾಗಿರುತ್ತದೆ. ಕಾನೂನು ತಜ್ಞರಿಂದ ಸೂಕ್ತ ಮಾರ್ಗದರ್ಶನ ಪಡೆದು ಮೇಲ್ಮನವಿ ಸಲ್ಲಿಸಲು ಜಿಲ್ಲಾಡಳಿತದ ವತಿಯಿಂದ ಕ್ರಮ ಕೈಗೊಳ್ಳಲಾಗುವದು.

ಕೃಷಿ ಭೂಮಿಯನ್ನು ಒದಗಿಸಲು ಕಾನೂನು ಪ್ರಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವದು ಎಂದು ಸಚಿವರು ಹೇಳಿದರು. ಆಶ್ರಮ ಶಾಲೆ ದುರಸ್ತಿಗೆ 7 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ಕಚೇರಿ ಪ್ರಾರಂಭಿಸಿದ್ದು, ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿ, ಸಿಇಓ, ಇಓ, ಐಟಿಡಿಪಿ, ಇಇ ಚೆಸ್ಕಾಂ, ದೇವರಪುರ ಗ್ರಾಮಸ್ಥರಾದ ಪ್ರೇಮ, ಮುಖಂಡ ತಮ್ಮಯ್ಯ ಮತ್ತಿತರರು ಇದ್ದರು.