ಕೂಡಿಗೆ, ಜು. 21: ಕೊಡಗು ಜಿ.ಪಂ. ಮತ್ತು ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆಯ ವತಿಯಿಂದ ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟ ನಾಶಕ ಬಳಕೆ ತರಬೇತಿ ಕಾರ್ಯಾಗಾರ ತಾ. 22 ರಂದು (ಇಂದು) ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದ ಶ್ರೀ ರಾಮಮಂದಿರ ಆಶ್ರಮ ಶಾಲೆಯ ಆವರಣದಲ್ಲಿ ನಡೆಯಲಿದೆ.
ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಾಗಾರವನ್ನು ಕೂಡಿಗೆ ಜಿ.ಪಂ. ಕ್ಷೇತ್ರದ ಸದಸ್ಯೆ ಮಂಜುಳಾ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸೋಮವಾರಪೇಟೆ ತಾ.ಪಂ. ಸದಸ್ಯೆ ಸಬಿತ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ಕೆ. ರಾಮಪ್ಪ, ಉಪ ನಿರ್ದೇಶಕ ಡಾ. ಕೆ. ರಾಜು ಆಗಮಿಸಲಿದ್ದಾರೆ. ಗೋಣಿಕೊಪ್ಪ ಕೆ.ವಿ.ಕೆ. ರೋಗ ತಜ್ಞ ಡಾ. ವಿರೇಂದ್ರಕುಮಾರ್ ತರಬೇತಿಯ ಉಪನ್ಯಾಸ ನೀಡಲಿದ್ದಾರೆ.