ಮಡಿಕೇರಿ, ಜು. 22: ಬಿಳಿ ಬಣ್ಣದ ಸಂಖ್ಯಾ ಫಲಕ ಹೊಂದಿರುವ ವಾಹನಗಳನ್ನು ಬಾಡಿಗೆಗೆ ಚಲಾಯಿಸುವಂತಿಲ್ಲ. ಅಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಹೆಚ್ಚುವರಿ ಪ್ರಭಾರ ಅಧಿಕಾರಿ ರಾಮಕೃಷ್ಣ ಅಯ್ಯರ್ ತಿಳಿಸಿದ್ದಾರೆ.
ಮಾಂದಲ್ಪಟ್ಟಿಮ, ಅಬ್ಬಿಫಾಲ್ಸ್ ಪ್ರವಾಸಿ ತಾಣಕ್ಕೆ ಬಿಳಿ ಬಣ್ಣದ ಸಂಖ್ಯಾ ಫಲಕ ಹೊಂದಿರುವ ವಾಹನಗಳಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಸಾರಿಗೆ ಇಲಾಖೆ ಇತ್ತೀಚೆಗೆ ಕೆಲವು ವಾಹನಗಳ ವಿರುದ್ಧ ಕ್ರಮ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಜೀಪು ಚಾಲಕರು ಹಾಗೂ ಮಾಲೀಕರು ತಮ್ಮ ವಾಹನ ಸಮೇತ ಸಾರಿಗೆ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿದರು. ಬಳಿಕ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.
ಬಿಳಿ ಬಣ್ಣದ ಸಂಖ್ಯಾ ಫಲಕ ಬಳಸಿ ವಾಹನಗಳನ್ನು ಚಲಾಯಿಸುವ ದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹಳದಿ ಬಣ್ಣದ ಸಂಖ್ಯಾ ಫಲಕ ಬಳಸಬೇಕು. ವಾಹನಗಳನ್ನು ತಪಾಸಣೆಗೊಳಪಡಿಸ ಲಾಗುವದು. ಬಿಳಿ ಬಣ್ಣದ ಸಂಖ್ಯಾ ಫಲಕ ಹೊಂದಿರುವ ವಾಹನಗಳು ಬಾಡಿಗೆಗೆ ಚಲಾಯಿಸುವದು ಕಂಡು ಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳ ಲಾಗುವದು ಎಂದು ಹೇಳಿದರು.
ಹಿರಿಯ ವಾಹನ ಮೋಟಾರು ನಿರೀಕ್ಷಕ ರಾಮನಾಥ್ ಮಾತನಾಡಿ, ಮಾಂದಲ್ಪಟ್ಟಿ ಹಾಗೂ ಅಬ್ಬಿಫಾಲ್ಸ್ ಪ್ರವಾಸಿ ತಾಣದಲ್ಲಿ ಬಿಳಿ ಬಣ್ಣದ ಸಂಖ್ಯಾ ಫಲಕ ಹೊಂದಿದ ವಾಹನಗಳು ನಿಯಮ ಬಾಹಿರವಾಗಿ ಹೆಚ್ಚು ಹಣ ವಸೂಲಿ ಮಾಡುತ್ತಿವೆ. ಇದರಿಂದ ಪ್ರವಾಸಿಗರಿಗೆ ಕಿರಿಕಿರಿ ಯಾಗಿತ್ತು. ತಪಾಸಣೆ ಮಾಡಿ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಹಳದಿ ಫಲಕ ಅಳವಡಿಸಿದಲ್ಲಿ ಅಪಘಾತ ಸಂಭವಿಸಿದಾಗ ವಿಮೆ ದೊರೆಯುತ್ತದೆ ಎಂದು ಹೇಳಿದರು.
ಈ ಸಂದರ್ಭ ಮೋಟಾರು ನಿರೀಕ್ಷಕ ಶಿವಕುಮಾರ್ ಇದ್ದರು.