ಮಡಿಕೇರಿ, ಜು.3 : ಕೊಡಗು ಜಿಲ್ಲ್ಲಾ ಬಿಲ್ಲವ ಸಮಾಜ ಸೇವಾ ಸಂಘದÀ ಮೂಲಕ ಯುವ ಒಕ್ಕೂಟ ಹಾಗೂ ಮಹಿಳಾ ವೇದಿಕೆಯನ್ನು ಸ್ಥಾಪಿಸಲು ಸಂಘದ ವಾರ್ಷಿಕ ಮಹಾಸಭೆಯಲ್ಲಿ ನಿರ್ಧರಿಸಲಾಗಿದೆ.

ನಗರದ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಿ.ವೈ. ಆನಂದ ರಘು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸಂಘÀದ ಬಲವರ್ಧನೆಗೆ ಅಗತ್ಯವಿರುವ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಬಿಲ್ಲವ ಸಮಾಜದ ಯುವ ಸಮೂಹವÀನ್ನು ಮತ್ತು ಮಹಿಳೆಯರನ್ನು ಸಂಘಟಿಸುವದಕ್ಕಾಗಿ ಯುವ ಒಕ್ಕೂಟ ಹಾಗೂ ಮಹಿಳಾ ವೇದಿಕೆ ಸ್ಥಾಪನೆಯ ಕುರಿತು ಹಲವರು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಬಿಲ್ಲವ ಸಮಾಜದ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವದಕ್ಕಾಗಿ ಪ್ರೋತ್ಸಾಹ ಧನವÀನ್ನು ನೀಡುವದು, ಇಲ್ಲಿಯವರೆಗೆ ಮಡಿಕೇರಿ ನಗರದಲ್ಲಿ ನಡೆದುಕೊಂಡು ಬರುತ್ತಿದ್ದ ಜಿಲ್ಲಾ ಮಟ್ಟದ ಕೋಟಿ ಚೆನ್ನಯ್ಯ ಕ್ರೀಡಾಕೂಟವನ್ನು ಮುಂದಿನ ವರ್ಷಗಳಲ್ಲಿ ಮೂರೂ ತಾಲೂಕು ಗಳಲ್ಲಿ ನಡೆಸಲು ನಿರ್ಧರಿಸಲಾಯಿತು. ಈ ಬಾರಿ ಡಿಸೆಂಬರ್ ತಿಂಗಳಿನಲ್ಲಿ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದಲ್ಲಿ ಕ್ರೀಡಾಕೂಟ ನಡೆಸಲು ತೀರ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಬಿ.ವೈ.ಆನಂದ ರಘು ಮಾತನಾಡಿ ಜಿಲ್ಲೆಯಲ್ಲಿರುವ ಎಲ್ಲಾ ಸಮಾಜ ಬಾಂಧವರೊಂದಿಗೆ ಸೌಹಾರ್ದತೆ ಯಿಂದ ಮುನ್ನಡೆಯುವ ಮೂಲಕ ಬಿಲ್ಲವ ಸಮಾಜವನ್ನು ಮಾದರಿ ಸಮಾಜವನ್ನಾಗಿ ಪರಿವರ್ತಿಸಲು ಕರೆ ನೀಡಿದರು. ಸಂಘದಲ್ಲಿ ಬಿಲ್ಲವ ಸಮಾಜದ ಎಲ್ಲರಿಗೂ ಸದಸ್ಯತ್ವ ನೀಡುವ ಮೂಲಕ ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕೆಂದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾಧರ ಬಂಗೇರ, ಸಹಕಾರ್ಯದರ್ಶಿ ಜಯಪ್ಪ, ಮಡಿಕೇರಿ ತಾಲೂಕು ಅಧ್ಯಕ್ಷ ಬಿ.ಎಂ. ರಾಜಶೇಖರ್, ಸೋಮವಾರಪೇಟೆ ಅಧ್ಯಕ್ಷ ಎನ್.ಡಿ. ಕೃಷ್ಣಪ್ಪ, ವೀರಾಜಪೇಟೆ ಅಧ್ಯಕ್ಷÀ ಚಂದ್ರಶೆÉೀಖರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.