ಕುಶಾಲನಗರ, ಆ 4: ಮುಳ್ಳುಸೋಗೆ ಗ್ರಾ.ಪಂ. ಕಚೇರಿಯಲ್ಲಿ ಬಿಲ್ ಕಲೆಕ್ಟರ್ ಓರ್ವ ಗುತ್ತಿಗೆದಾರ ಕೆಲಸ ನಿರ್ವಹಿಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ತಕ್ಷಣ ಆತನನ್ನು ಬೇರೆಡೆಗೆ ವರ್ಗಾಯಿಸುವಂತೆ ಪಂಚಾಯಿತಿ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳ ಲಾಗಿದೆ. ಕಳೆದ ಎರಡು ದಶಕಗಳಿಂದ ಗ್ರಾ.ಪಂ.ಯಲ್ಲಿ ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಮಾರಸ್ವಾಮಿ ಎಂಬವರು ಗ್ರಾಮದ ನಾಗರಿಕರಿಗೆ ಸಮರ್ಪಕ ಸೇವೆ ಸಲ್ಲಿಸು ವಲ್ಲಿ ಅಡ್ಡಿಯುಂಟು ಮಾಡುತ್ತಿದ್ದಾರೆ ಎನ್ನುವ ದೂರುಗಳು ಬರುತ್ತಿದ್ದ ಹಿನ್ನೆಲೆ ಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪಂಚಾಯಿತಿ ಹಿರಿಯ ಸದಸ್ಯ ಎಂ.ಎಸ್. ಶಿವಾನಂದ ತಿಳಿಸಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯಲು ಗ್ರಾಮ ಪಂಚಾಯಿತಿಗೆ ಬರುವ ನಾಗರಿಕರಿಂದ ಬಿಲ್ ಕಲೆಕ್ಟರ್ ಕುಮಾರಸ್ವಾಮಿ ದಾಖಲೆಗಳನ್ನು ಸಂಗ್ರಹಿಸಿ ತನ್ನ ಮೂಲಕ ಕಟ್ಟಡ ನಿರ್ಮಾಣ ಮಾಡಲು ಒತ್ತಾಯಿಸುತ್ತಿ ರುವ ಪ್ರಕರಣಗಳು ಬೆಳಕಿಗೆ ಬಂದಿದ್ದು ಕಚೇರಿಯಲ್ಲಿ ಇತರೆ ಅಧಿಕಾರಿಗಳ ಕೆಲಸದ ನಡುವೆ ಹಸ್ತಕ್ಷೇಪ ಮಾಡುತ್ತಿ ರುವ ದೂರುಗಳ ಬಂದ ಬಗ್ಗೆ ಅವರು ತಿಳಿಸಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ಅನಾನುಕೂಲ ಉಂಟಾಗುತ್ತಿರುವದಾಗಿ ದೂರುಗಳು ಬಂದಿರುವದಾಗಿ ಸಭೆಯಲ್ಲಿ ಚರ್ಚೆ ನಡೆದಿದೆ.

ಕಟ್ಟಡ ಲೈಸನ್ಸ್, ವ್ಯಾಪಾರ ಪರವಾನಗಿ, ವಿದ್ಯುತ್ ಎನ್‍ಓಸಿಗಳನ್ನು ನೀಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದ್ದು, ಈ ನಿಟ್ಟಿನಲ್ಲಿ ಸಭೆಯಲ್ಲಿ ಠರಾವು ಮಂಡಿಸಿದ್ದು, ತಕ್ಷಣದಿಂದಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪಂಚಾಯಿತಿ ಕಚೇರಿಯಲ್ಲಿ ಸದಸ್ಯರು ಗಳಿಗೆ ಗೌರವ ನೀಡದೆ ಸದಸ್ಯರುಗಳ ನಡುವೆ ಗೊಂದಲ ಉಂಟುಮಾಡುತ್ತಿ ರುವ ಬಗ್ಗೆ ಸರ್ವ ಸದಸ್ಯರು ಒಕ್ಕೊರಲಿ ನಿಂದ ಇವರ ವಿರುದ್ಧ ನಿರ್ಣಯ ಕೈಗೊಂಡಿದ್ದು ತಕ್ಷಣ ಬೇರೆಡೆಗೆ ವರ್ಗಾ ಯಿಸುವಂತೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.