ಮಡಿಕೇರಿ, ಜ. 15: ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆಯಲ್ಲಿಯೂ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಕಣಕ್ಕಿಳಿದಿದ್ದ ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ್ದಾರೆ. ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕಿನ ಎಲ್ಲಾ ಸ್ಥಾನಗಳನ್ನು ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಮೂಲಕ ‘ಕ್ಲೀನ್ ಸ್ವೀಪ್' ಮಾಡಿದ್ದಾರೆ. ಸೋಮವಾರಪೇಟೆಯಲ್ಲಿ ಮಿಶ್ರ ಫಲ ದೊರೆತಿದ್ದು, ಬಿಜೆಪಿ 5 ಸ್ಥಾನಗಳಿಸಿದ್ದರೆ ಇಲ್ಲಿ ಚೇತರಿಕೆ ಕಂಡಿರುವ ಜೆಡಿಎಸ್ ತನ್ನ ಬೆಂಬಲಿತ 5 ಅಭ್ಯರ್ಥಿಗಳನ್ನು ಗೆಲುವು ಸಾಧಿಸುವಂತೆ ಮಾಡಿ ಬೀಗಿದೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಜಿಲ್ಲೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದೆ. ಜಿಲ್ಲೆಯ ಒಟ್ಟು 37 ಸ್ಥಾನಗಳಲ್ಲಿ ಬಿಜೆಪಿ 30, ಜೆಡಿಎಸ್- 5 ಹಾಗೂ ಕಾಂಗ್ರೆಸ್ 2 ಸ್ಥಾನ ಗಳಿಸಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಮಾತ್ರ ಕಾಂಗ್ರೆಸ್ಗೆ ಎರಡು ಸ್ಥಾನ ಲಭ್ಯವಾಗಿದೆ. ಮೂರು ತಾಲೂಕಿನ ವರ್ತಕರ ಕ್ಷೇತ್ರದ ಪೈಕಿ ಮಡಿಕೇರಿ ಹಾಗೂ ವೀರಾಜಪೇm Éಯಲ್ಲಿ ಬಿಜೆಪಿಗೆ ಎರಡು ಹಾಗೂ ಸೋಮವಾರಪೇಟೆಯಲ್ಲಿ ಕಾಂಗ್ರೆಸ್ಗೆ ಒಂದು ಸ್ಥಾನ ಲಭ್ಯವಾಗಿದೆ. ತಾ. 12ರಂದು ನಡೆದ ಚುನಾವಣೆಯ ಮತ ಎಣಿಕೆ ತಾ. 14ರಂದು ಮೂರು ತಾಲೂಕು ಕೇಂದ್ರಗಳಲ್ಲಿ ನಡೆಯಿತು.