ವೀರಾಜಪೇಟೆ, ಆ. 31: ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ವಿದ್ಯಾರ್ಥಿನಿ ಬಿ.ಜಿ. ಮಿಶೋಲ್ ಪ್ರಕಾಶ್, ಬಿ.ಕಾಂ ಪದವಿ ಪರೀಕ್ಷೆಯಲ್ಲಿ ಶೇಕಡ 91.74 (4587) ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

“ಶಕ್ತಿ” ಪ್ರತಿನಿಧಿ ಮಿಶೋಲ್ ಪ್ರಕಾಶನನ್ನು ಸಂದರ್ಶಿಸಿದಾಗ ಕಾಲೇಜಿನ ಉಪನ್ಯಾಸಕರು ಪ್ರಾಂಶುಪಾಲರು ನೀಡಿದ ಉತ್ತೇಜನದಿಂದ ಬಿ.ಕಾಂ. ಪದವಿಯಲ್ಲಿ ಅತಿ ಹೆಚ್ಚಿನ ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಲು ಕಾರಣವಾಗಿದೆ. ಮನೆಯಲ್ಲಿ ಪೋಷಕರು ಹೆಚ್ಚಿನ ಮುತುವರ್ಜಿ ವಹಿಸಿದ್ದು ಈ ಸ್ಥಾನ ಗಳಿಕೆಯಾಗಿದೆ ಎಂದು ತಿಳಿಸಿದ ಮಿಶೋಲ್ ಮುಂದೆ ಸಿ.ಎ. ಶಿಕ್ಷಣ ಪಡೆದು ಬಳಿಕ ವಿದೇಶದಲ್ಲಿ ಸಿ.ಎ. ಶಿಕ್ಷಣದ ಉನ್ನತ ವ್ಯಾಸಂಗದ ತರಬೇತಿ ಪಡೆದು ಭಾರತÀ ದೇಶದಲ್ಲಿಯೇ ಸೇವೆ ಸಲ್ಲಿಸುವದಾಗಿ ಪ್ರತಿಕ್ರಿಯೆ ನೀಡಿದ್ದಾಳೆ.

ಐಮಂಗಲ ಗ್ರಾಮದ ಮಿಶೋಲ್ ಪ್ರಕಾಶ್ ವೀರಾಜಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಿಚಂಡ ಸ್ಮಿತಾ ಪ್ರಕಾಶ್ ಹಾಗೂ ಪ್ರಕಾಶ್ ದಂಪತಿಯ ಪುತ್ರಿ.