ಗೋಣಿಕೊಪ್ಪ, ಆ. 24: ಬಾಳುಗೋಡುವಿನಲ್ಲಿ ಕೊಡವ ಸಮಾಜ ಒಕ್ಕೂಟದ ವತಿಯಿಂದ ನವೆಂಬರ್ 4, 5 ಹಾಗೂ 6ರಂದು ನಡೆಯಲಿರುವ ಕೊಡವ ನಮ್ಮೆಯ ಬಗ್ಗೆ ಕಳ್ಳಿಚಂಡ ವಿಷ್ಣು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕೊಡವ ನಮ್ಮೆಯ ಪ್ರಯುಕ್ತ ನಡೆಯಲಿರುವ ಪೈಪೋಟಿಗಳ ಬಗ್ಗೆ ಚರ್ಚಿಸಿ, ಹಾಕಿ, ಹಗ್ಗಜಗ್ಗಾಟ, ಗುಂಡು ಎಸೆತ ಹಾಗೂ ಸಾಂಸ್ಕøತಿಕ ಪೈಪೋಟಿಗಳಲ್ಲಿ ಕೋಲಾಟ್, ಬೊಳಕಾಟ್, ಕತ್ತಿಯಾಟ್, ಉಮ್ಮತ್ತಾಟ್, ಪರೆಯಕಳಿ, ಬಾಳೋಪಾಟ್, ತಾಲಿಪಾಟ್, ಸಮ್ಮಂದ ಅಡ್ಕ್ವೋ, ಕಪ್ಪೆಯಾಟ್ ಪೈಪೋಟಿಗಳನ್ನು ನಡೆಸುವ ಬಗ್ಗೆ ತೀರ್ಮಾನಿ¸ Àಲಾಯಿತು.
ಸಭೆಯಲ್ಲಿ ಗೌರವ ಕಾರ್ಯದರ್ಶಿ ವಾಟೇರಿರ ಶಂಕರಿ, ಕಾಳಿಮಾಡ ಮೋಟಯ್ಯ, ಬೊಳಿಯಂಗಡ ಡಾಲೂ ಪೂವಯ್ಯ, ಮೂಕೊಂಡ ಬೋಸ್ದೇವಯ್ಯ, ಕಂಬೀರಂಡ ಕಾಳಪ್ಪ ಹಾಗೂ ಮುಂತಾದವರು ಉಪಸ್ಥಿತರಿದ್ದರು.