ಮಾಯಮುಡಿ, ಜ. 19: 1990-91ರಲ್ಲಿ ಪ್ರಾರಂಭವಾಗಿ ಇದೀಗ ತನ್ನ 25 ವರ್ಷಗಳನ್ನು ಪೂರೈಸುತ್ತಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳಾಜಿ- ಚೆನ್ನಂಗೊಲ್ಲಿ ಇದರ ಬೆಳ್ಳಿಹಬ್ಬದ ಆಚರಣೆಯನ್ನು ತಾ. 15, 16ರಂದು ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಹಳೆಯ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಪ್ರತ್ಯೇಕವಾಗಿ ವಿವಿಧ ಕ್ರೀಡೆ ಹಾಗೂ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಕ್ರೀಡೋತ್ಸವದ ಉದ್ಘಾಟನೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ರಮ್ಯ ನೆರವೇರಿಸಿದರು. ಮಾಯಮುಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೌರಿರಾಮ, ಸದಸ್ಯರಾದ ಟಿ.ವಿ. ಶ್ರೀಧರ, ಪಿ.ಬಿ. ಮಂಜುಳ ಹಾಗೂ ಬಿ.ಎಸ್. ರುಕ್ಮಿಣಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭವು ಸ್ಥಾಪಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಂ. ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಮೋಹನ್ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಗೋಣಿಕೊಪ್ಪದ ವಿವೇಕಾನಂದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಮನುಷ್ಯನ ಜೀವನದಲ್ಲಿ ವಿದ್ಯೆಯ ಮಹತ್ವದ ಬಗ್ಗೆ ಮನಮುಟ್ಟುವಂತೆ ವಿವರಿಸಿದರು. ಸರ್ವರೂ ವಿದ್ಯಾವಂತರಾಗಿ, ವಿನಯವಂತರಾಗಿ ಬಾಳುವಂತೆ ಕರೆಕೊಟ್ಟರು. ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆ ಪಂಕಜ ಮಾತನಾಡಿ, ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವದಾಗಿ ಭರವಸೆಯನ್ನಿತ್ತರು. ಇನ್ನೋರ್ವ ಅತಿಥಿ ತಾಲೂಕು ಪಂಚಾಯಿತಿ ಸದಸ್ಯೆ ಬಿ.ಕೆ. ಸುಮ ಮಾತನಾಡಿ, ಕಾರ್ಯಕ್ರಮಕ್ಕೆ ಶುಭಕೋರಿ ತಾನೂ ತನ್ನ ಅನುದಾನದಲ್ಲಿ ಶಾಲೆಯ ಬೇಡಿಕೆಗಳಿಗೆ ಸ್ಪಂದಿಸುವದಾಗಿ ತಿಳಿಸಿದರು. ಗ್ರಾ.ಪಂ. ಸದಸ್ಯ ಟಿ. ಶ್ರೀಧರ್ ಶಾಲೆ ಹಾಗೂ ಊರಿನ ಅಭಿವೃದ್ಧಿಗೆ ಶ್ರಮಿಸುವದಾಗಿ ನುಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸ್ಥಾಪಕ ಅಧ್ಯಕ್ಷ ಎಸ್.ಎಂ. ವಿಶ್ವನಾಥ್ ಮಾತನಾಡಿ, ಶಾಲೆಗೆ ಕಾರಣಕರ್ತ ಅಂದಿನ ಜಿಲ್ಲಾ ಪರಿಷತ್ ಅಧ್ಯಕ್ಷ ಜೆ.ಎ. ಕರುಂಬಯ್ಯ ಹಾಗೂ ಅಂದಿನ ದೇವರಪುರ ಮಂಡಲಪಂಚಾಯಿತಿ ಪ್ರಧಾನರಾಗಿದ್ದ, ಮಾಜಿ ವಿಧಾನಪರಿಷತ್ ಸದಸ್ಯರೂ ಆದ ಸಿ.ಎಸ್. ಅರುಣ್ ಮಾಚಯ್ಯ ಅವರ ಕೊಡುಗೆಯನ್ನು ಸ್ಮರಿಸಿದರು. ಸ್ಥಳೀಯ ಹಿರಿಯ ಚೇತನರಾದ ಟಿ.ಆರ್. ಅಯ್ಯಪ್ಪ ಹಾಗೂ ಎ.ಪಿ. ಅಂಬು ಆಚಾರಿ ಅವರ ಮುತುವರ್ಜಿಯನ್ನು ಶ್ಲಾಘಿಸಿದರಲ್ಲದೆ, ಶಾಲೆಯ ಇಂದಿನ ಬೆಳವಣಿಗೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಮುಂದೆ ಸುವರ್ಣ ಮಹೋತ್ಸವ ಶತಮಾನೋತ್ಸವಗಳನ್ನು ಆಚರಿಸುವಂತಾಗಲೆಂದು ಹಾರೈಸಿದರು.
ನಿರ್ಗಮಿತ ಮುಖ್ಯೋಪಾಧ್ಯಾಯಿನಿ ಬಿ.ಟಿ. ಕಾವೇರಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರಲ್ಲದೆ ಶಾಲೆಗೆ