ಆಲೂರು-ಸಿದ್ದಾಪುರ, ಡಿ. 25: ವಿದ್ಯಾರ್ಥಿಗಳು ತನ್ನ ಮುಂದಿನ ಭವಿಷ್ಯದಲ್ಲಿ ಉದ್ಯೋಗದ ಅರ್ಹತೆಗಾಗಿ ಶಿಕ್ಷಣವನ್ನು ಪಡೆಯುತ್ತಿದ್ದೇವೆ ಎಂಬ ಮನೋಭಾವನೆಯನ್ನು ಬಿಟ್ಟು ಸುಸಂಸ್ಕøತ ಸಮಾಜದಲ್ಲಿ ಉತ್ತಮ ಜೀವನವನ್ನು ನಡೆಸುವದಕ್ಕೆ ಶಿಕ್ಷಣವನ್ನು ಪಡೆಯುತ್ತಿದ್ದೇವೆ ಎಂಬ ಮನೋಭಾವನೆಯನ್ನು ಹೊಂದಬೇಕು ಎಂದು ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷ ಮಹಮದ್‍ಗೌಸ್ ಅಭಿಪ್ರಾಯಪಟ್ಟರು. ಅವರು ಸ್ಥಳೀಯ ಬಾಪೂಜಿ ಆಂಗ್ಲ-ಕನ್ನಡ ಮಾಧ್ಯಮ ವಿದ್ಯಾಸಂಸ್ಥೆಯ 2016-17ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾ.ಪಂ. ಸದಸ್ಯ ಹೆಚ್.ಆರ್. ಹರೀಶ್ ಕುಮಾರ್, ವಿದ್ಯಾಸಂಸ್ಥೆ ಅಧ್ಯಕ್ಷೆ ಇಂದಿರ ಲಿಂಗರಾಜ್ ಮಾತನಾಡಿದರು. ಸಮಾರಂಭದಲ್ಲಿ ಪ್ರಮುಖರಾದ ಲಿಂಗರಾಜ್, ವಿದ್ಯಾಸಂಸ್ಥೆ ನಿರ್ದೇಶಕರಾದ ಮಹೇಂದ್ರ, ವೀರೇಶ್‍ಗೌಡ, ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕಿ ವಾಣಿ ಅಶ್ವಥ್ ಮುಂತಾದವರಿದ್ದರು. ಈ ಸಂದರ್ಭದಲ್ಲಿ ಸದರಿ ಶಾಲೆಯ ವಿದ್ಯಾರ್ಥಿಗಳು ಹೊರತಂದ ‘ಚಿಗುರು’ ವಾರ್ಷಿಕ ಸಂಚಿಕೆಯನ್ನು ಸಭೆಯಲ್ಲಿ ಅನಾವರಣಗೊಳಿಸಲಾಯಿತು. ಕೊನೆಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.