ಶ್ರೀಮಂಗಲ, ಡಿ. 17: ಕೊಡವರು ತಮ್ಮ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ತಮ್ಮಲ್ಲಿ ಒಗ್ಗಟ್ಟು ಹಾಗೂ ಬಾಂಧವ್ಯ ಬೆಸೆಯಲು ಸಹಕಾರಿ ಯಾಗಿದೆ. ಹಿರಿಯರು ದೂರದೃಷ್ಟಿಯ ಸಂಕೇತವಾಗಿ ಹಬ್ಬಗಳ ಸಾಮೂಹಿಕ ಆಚರಣೆಗೆ ಪುತ್ತರಿ ಕೋಲ್ ಮಂದ್, ಕೈಲ್ ಪೋಳ್ದ್ ಹಬ್ಬದ ಕ್ರೀಡಾಕೂಟ ಸಾಕ್ಷಿಯಾಗಿದೆ ಎಂದು ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕಿ ಕೂಪದಿರ ಶಾರದಾ ನಂಜಪ್ಪ ಅಭಿಪ್ರಾಯಪಟ್ಟರು.
ತಾವಳಗೇರಿ ಮೂಂದ್ ನಾಡ್ ಕೋಲ್ ಮಂದ್ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕೊಡವರು ತಮ್ಮ ಮಕ್ಕಳನ್ನು ಹಬ್ಬ, ಮದುವೆ ಇತರ ಸಭೆ ಸಮಾರಂಭ, ಹಾಕಿ ನಮ್ಮೆ, ಸಾಂಸ್ಕøತಿಕ ನಮ್ಮೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪೋಷಕರು ಮಕ್ಕಳಲ್ಲಿ ಜವಾಬ್ದಾರಿ ಹಾಗೂ ತಮ್ಮ ಭಾಷೆ ಸಂಸ್ಕøತಿ ಬಗ್ಗೆ ಅಭಿಮಾನ, ಬಾಂಧವ್ಯ ಮೂಡಿಸಲು ಪ್ರಯತ್ನಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಕೆಂಜಂಗಡ ಗಣಪತಿ, ಅಜ್ಜಮಾಡ ಶಂಕರು ನಾಚಪ್ಪ, ಅಜ್ಜಮಾಡ ಮುತ್ತಮ್ಮ, ಮಚ್ಚಮಾಡ ಸುಮಂತ್ ಚೊಟ್ಟೆಯಂಡಮಾಡ ವಿಶು ರಂಜಿ ಉಪಸ್ಥಿತರಿದ್ದರು.
ತಾವಳಗೇರಿ ಮೂಂದ್ ನಾಡ್ ಕೋಲ್ ಮಂದ್‍ನ ಕಾರ್ಯಕ್ರಮದಲ್ಲಿ ನಾಡ್‍ತಕ್ಕ ಕೈಬಿಲಿರ ಹರೀಶ್, ಭದ್ರಕಾಳಿ ದೇವರ ತಕ್ಕ ಮಚ್ಚಮಾಡ ಪಾಪು ಸೋಮಯ್ಯ, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ, ವಗರೆ ಅಯ್ಯಪ್ಪ ದೇವರ ತಕ್ಕ ಕಟ್ಟೇರ ಈಶ್ವರ ಹಾಗೂ ಪ್ರಮುಖರಾದ ಮಂದಮಾಡ ತೇಜಪ್ಪ, ತಡಿಯಂಗಡ ರಮೇಶ್, ಕೋಟ್ರಮಾಡ ಜಪ್ಪು ದೇವಯ್ಯ, ಚಂಗುಲಂಡ ಸತೀಶ್, ಕೈಬಿಲಿರ ಸುರೇಶ್, ಸಂಭ್ರಮ ಮಹಿಳಾ ಸಾಂಸ್ಕøತಿಕ ಮತ್ತು ಕ್ರೀಡಾ ಸಂಸ್ಥೆಯ ಅಧ್ಯಕ್ಷೆ ತಡಿಯಂಗಡ ಸೌಮ್ಯ ಕರುಂಬಯ್ಯ ಹಾಗೂ ಸದಸ್ಯೆಯರು ಸೇರಿದಂತೆ ಪ್ರಮುಖರು ಹಾಜರಿದ್ದು, ಕಾರ್ಯಕ್ರಮದ ಜವಾಬ್ದಾರಿ ವಹಿಸಿದ್ದರು.