ಮಡಿಕೇರಿ, ನ.30 : ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ‘ಪ್ರಬುದ್ಧ ಭಾರತದ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವವನ್ನು ಉಳಿಸೋಣ’ ಎನ್ನುವ ಕೇಂದ್ರ ವಿಷಯದಡಿ ಡಿ.4 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ವಿಚಾರ ಸಂಕಿರಣ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿವಿಎಸ್ ಸಂಯೋಜಕ ಮೋಹನ್ ಮೌರ್ಯ ಸಿ.ಜೆ. ಸಾಹುಮಹಾರಾಜರÀ ಜನ್ಮ ದಿನವಾದ ಜುಲೈ 24 ರಿಂದ ಆರಂಭಗೊಂಡ ವಿಚಾರ ಸಂಕಿರಣ ರಾಜ್ಯದ ವಿವಿಧೆಡೆಗಳಲ್ಲಿ ಆಯೋಜಿತವಾಗುತ್ತಿದ್ದು, ಮುಂದಿನ ಜ.24 ರಂದು ಬೆಂಗಳೂರಿನಲ್ಲಿ ನಡೆಯುವ ವಿಚಾರ ಸಂಕಿರಣ ದೊಂದಿಗೆ ಸಮಾರೋಪಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಡಿ.4 ರಂದು ಬೆಳಗ್ಗೆ 10.30 ಗಂಟೆಗೆ ವಿಚಾರ ಸಂಕಿರಣವನ್ನು ದಲಿತ ಸಂಘರ್ಷ ಸಮಿತಿಯ ಎಂ.ಜಿ. ಶಿವ ಶಂಕರ್ ಉದ್ಘಾಟಿಸಲಿದ್ದು, ಮುಖ್ಯ ಭಾಷಣಕಾರರಾಗಿ ಅಂಬೇಡ್ಕರ್ ವಿಚಾರವಾದಿಗಳಾದ ಶ್ರೀಧರ್ ಪ್ರಭು, ಮೈಸೂರು ಬಿವಿಎಸ್‍ನ ಜಿ.ಕೆ. ಮೋಹನ್ ಕುಮಾರ್ ಪಾಲ್ಗೊಳ್ಳಲಿದ್ದಾರೆ. “ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವ ಉಳಿಸೋಣ” ವಿಷಯದಡಿ ಗೌತಮಿ ಎಂ.ಎಸ್. ಪ್ರಬಂಧ ಮಂಡಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ| ಹೆಚ್.ವಿ. ದೇವದಾಸ್, ಮೈಸೂರಿನ ಅಂಬೇಡ್ಕರ್ ವಿಚಾರವಾದಿ ನಾಗಸಿದ್ಧಾರ್ಥ ಹೊಲೇಯರ್, ಕೊಡಗು ಬ್ಯಾರಿಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಷಂಶುದ್ದೀನ್ ಬಿ.ಎ., ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸೋಮವಾರಪೇಟೆಯ ತೋಟಗಾರಿಕಾ ಅಧಿಕಾರಿ ಗಣೇಶ್ ಹೆಚ್.ಎಂ., ವೀರಾಜಪೇಟೆ ನ್ಯಾಯಾಂಗ ಇಲಾಖೆಯ ಶಿರಸ್ತೇದಾರ್ ಗೋವಿಂದರಾಜು, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ರಾಜು, ಬಿಆರ್‍ಪಿ ಮಡಿಕೇರಿ ಜಯಮ್ಮ ಹೆಚ್.ಪಿ., ಹೆಬ್ಬಾಲೆಯ ಡಿಇಇ ಶ್ರೀನಿವಾಸ್, ಬಿವಿಎಸ್ ಕುಶಾಲನಗರ ಸಂಚಾಲಕ ಲಕ್ಷ್ಮಣ, ಬಿವಿಎಸ್ ಜಿಲ್ಲಾಧ್ಯಕ್ಷ ಸಚಿನ್, ಬಿವಿಎಸ್ ನಗರಾಧ್ಯಕ್ಷ ಅರ್ಜುನ್ ದೇವ್, ಬಿವಿಎಸ್ ಸೋಮವಾರಪೆÉೀಟೆ ಬಿವಿಎಸ್ ಸಂಯೋಜಕ ಶರತ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿವಿಎಸ್ ನಗರಾಧ್ಯಕ್ಷ ಅರ್ಜುನ್ ದೇವ್, ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್, ಸಂಘಟನಾ ಕಾರ್ಯದರ್ಶಿ ರತನ್ ಉಪಸ್ಥಿತರಿದ್ದರು.