ಬೆಂಗಳೂರು, ನ. 16: ಕರ್ನಾಟಕದ ಹಲವೆಡೆ ನೀರಿಗೆ ಬರ ಪರಿಸ್ಥಿತಿ ಎದುರಾಗಿದ್ದು, ಬರಪೀಡಿತ ಎಂದು ಗುರುತಿಸಲ್ಪಟ್ಟ ಜಿಲ್ಲೆ ಮತ್ತು ತಾಲೂಕುಗಳಲ್ಲಿ ತಾ. 15.6.2017ರ ವರೆಗಿನ ಅವಧಿಯನ್ನು ‘ತುರ್ತು ಪರಿಸ್ಥಿತಿ ಅವಧಿ’ ಎಂದು ರಾಜ್ಯ ಸರಕಾರ ಘೋಷಿಸಿದೆ.ಈ ಅವಧಿಯಲ್ಲಿ ಬರಪೀಡಿತ ಪ್ರದೇಶಗಳಲ್ಲಿ ಅನುದಾನಗಳಡಿ ಕೈಗೊಳ್ಳುವ ಕುಡಿಯುವ ನೀರು ಸರಬರಾಜು ಸಂಬಂಧಿತ ತುರ್ತು ಕಾಮಗಾರಿಗಳನ್ನು ಕೂಡಲೇ ಕೈಗೊಂಡು, ಬರಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿ, ಸಾರ್ವಜನಿಕರಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲು ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯ್ತಿ ನೀಡಿದೆ.

ಎಸ್‍ಎಫ್‍ಸಿ ಅನುದಾನದಡಿ ಯಲ್ಲಿ ನಗರಾಭಿವೃದ್ಧಿ ಇಲಾಖೆಯು ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಿಡುಗಡೆಗೊಳಿಸಿರುವ ಅನುದಾನ ಮತ್ತು ಎಸ್‍ಎಫ್‍ಸಿ ಮುಕ್ತ ನಿಧಿ ಅನುದಾನದಡಿ ಮಾರ್ಗಸೂಚಿ ಗಳನ್ವಯ ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ನಿಗದಿಪಡಿಸಿ ಕೊಂಡಿರುವ ಅನುದಾನ.

ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಸ್ವಂತ, ನಿಧಿ ಅನುದಾನದಡಿ ಕುಡಿಯುವ ನೀರಿನ ಕಾಮಗಾರಿಗಳಿಗೆ ನಿಗದಿಪಡಿಸಿಕೊಂಡಿರುವ ಅನುದಾನ ಒಳಗೊಂಡಿದೆ.

ಕೊಡಗು ಜಿಲ್ಲೆಯ ಮೂರು ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಲಾಗಿದ್ದು, ಇಡೀ ಜಿಲ್ಲೆಗೆ ‘ತುರ್ತು ಪರಿಸ್ಥಿತಿ ಅವಧಿ’ ಅನ್ವಯವಾಗಲಿದೆ.