ಗೋಣಿಕೊಪ್ಪಲು, ನ. 26: ಎಡಪಕ್ಷಗಳು ತಾ. 28 ರಂದು ಕರೆ ನೀಡಿರುವ ಬಂದ್ ಕರೆಗೆ ಬಿಜೆಪಿ ಬೆಂಬಲಿಸುವದಿಲ್ಲ. ಸಾರ್ವಜನಿಕರು ಕಪ್ಪು ಹಣದ ವಿರುದ್ಧ ಹೋರಾಡಲು ಬಂದ್‍ನಿಂದ ಹಿಂದೆ ಸರಿಯಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಮನವಿ ಮಾಡಿದರು.ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಪ್ಪು ಹಣ ಇಟ್ಟವರು ಬಂದ್ ನಡೆಸಬೇಕೆನ್ನುವ ಚಿಂತನೆಯಲ್ಲಿದ್ದಾರೆ ಎಂದು ಆರೋಪಿಸಿದ ಅವರು, ಇದನ್ನು ಅರಿತು ಯಾರೂ ಕೂಡ ಬೆಂಬಲ ನೀಡದೆ ಪ್ರಧಾನಮಂತ್ರಿ ಮೋದಿ ಅವರ ಸ್ವಚ್ಛ ಭಾರತ್ ಕನಸಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಕಾಳ ಧನಿಕರು ಜನ್-ಧನ್ ಖಾತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಜನ್-ಧನ್ ಖಾತೆ ಹೊಂದಿದವರು ಯಾರದೇ ಹಣವನ್ನು ತಮ್ಮ ಖಾತೆಯಲ್ಲಿ ಇಟ್ಟುಕೊಳ್ಳಲು ಮುಂದಾಗಬೇಡಿ. ಇದು ಪತ್ತೆಯಾದರೆ ಸರ್ಕಾರದ ಯಾವದೇ ಸವಲತ್ತು ಸಿಗುವದಿಲ್ಲ ಎಂದರು.

ಗೊಷ್ಠಿಯಲ್ಲಿ ತಾಲೂಕು ಖಜಾಂಚಿ ಚೋಡುಮಾಡ ಶ್ಯಾಂ, ಪ್ರಮುಖರುಗಳಾದ ಸುಮಿ ಸುಬ್ಬಯ, ಕಾವೇರಿ ಮಂದಣ್ಣ ಉಪಸ್ಥಿತರಿದ್ದರು.