*ಗೋಣಿಕೊಪ್ಪಲು, ಜ. 23: ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಗ್ರಾ.ಪಂ. ಪಣತೊಟ್ಟಿದ್ದು, ಪಟ್ಟಣದಲ್ಲಿ ಸಾರ್ವಜನಿಕರು ಹಾಗೂ ವರ್ತಕರಿಗೆ ಜಾಗೃತಿ ಮೂಡಿಸಲು ಕರಪತ್ರಗಳನ್ನು ಹಂಚಿ ಜಾಥಾ ನಡೆಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರುಗಳು ಚಾಲನೆ ನೀಡಿದರು. ಸೋಮವಾರ ಉಮಾಮಹೇಶ್ವರಿ ದೇವಸ್ಥಾನದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹರಿಶ್ಚಂದ್ರಪುರದವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು, ಚೇಂಬರ್ ಆಫ್ ಕಾಮರ್ಸ್, ವಿವಿಧ ಸಂಘ ಸಂಸ್ಥೆಗಳು, ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರುಗಳು ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.
ಪಟ್ಟಣದಲ್ಲಿ ಸಾರ್ವಜನಿಕರು ಹಾಗೂ ವರ್ತಕರು ಪ್ಲಾಸ್ಟಿಕ್ ಬಳಕೆ ಬಳಸುವದನ್ನು ಮತ್ತು ಮಾರಾಟ ಮಾಡುವದನ್ನು ಕಂಡು ಬಂದಲ್ಲಿ ನಿದ್ರ್ರಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವದು. ಪ್ಲಾಸ್ಟಿಕ್ ತೋರಣ, ಪ್ಲಾಸ್ಟಿಕ್ ಬ್ಯಾಗ್, ಪ್ಲಾಸ್ಟಿಕ್ ತಟ್ಟೆ, ಲೋಟ, ಚಮಚ, ಬಿತ್ತಿ ಪತ್ರ, ಪ್ಲೆಕ್ಸ್, ಪ್ಲಾಸ್ಟಿಕ್ ಬಾವುಟ ಇತರ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ ತಿಳಿಸಿದರು.
ತಾ. 25ರ ನಂತರ ಸಾರ್ವಜನಿ ಕರು ಹಾಗೂ ವರ್ತಕರು ಪ್ಲಾಸ್ಟಿಕ್ ಬಳಸಿದರೆ ಪರಿಸರ ಸಂರಕ್ಷಣಾ ಕಾಯ್ದೆ 1986ರ ಸೆಕ್ಷನ್ 19ರ ಅಡಿ ಉಲ್ಲಂಘಿಸಿ ದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವದು. 5 ಸಾವಿರ ರೂ. ದಂಡ ವಿಧಿಸಲಾಗು ವದು. ವರ್ತಕರ ಪರವಾನಗೆಯನ್ನು ರದ್ದುಗೊಳಿಸುವ ಕ್ರಮ ಕೈಗೊಳ್ಳಲಾಗುವದು ಎಂದು ಸದಸ್ಯ ಬಿ.ಎನ್. ಪ್ರಕಾಶ್ ಹೇಳಿದರು.
ಗ್ರಾ.ಪಂ. ಸದಸ್ಯರುಗಳಾದ ಕುಲ್ಲಚಂಡ ಬೋಪಣ್ಣ, ರತಿ ಅಚ್ಚಪ್ಪ, ಜೆ.ಕೆ. ಸೋಮಣ್ಣ, ಮುರುಗ, ರಾಮಕೃಷ್ಣ, ಕಲೀಂಮುಲ್ಲ, ಧನಲಕ್ಷ್ಮಿ, ಮಂಜುಳ, ಯಾಸ್ಮೀನ್, ಶಾಹೀದ್, ಪ್ರಭಾವತಿ, ಮಮಿತಾ ಮನೋಜ್, ಸುರೇಶ್ ರೈ, ರಾಜಶೇಖರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನಿಲ್ ಮಾದಪ್ಪ, ಪ್ರೆಸ್ ಕ್ಲಬ್ ಅಧ್ಯಕ್ಷ ಕೇಶವ ಕಾಮತ್, ಇಗ್ಗುತಪ್ಪ ಕೊಡವ ಕೊಡವ ಸಂಘದ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ, ಮಹಿಳಾ ಸಮಾಜ ಅಧ್ಯಕ್ಷೆ ಚೇಂದಂಡ ಸುಮಿ ಸುಬ್ಬಯ್ಯ, ಮಾಜಿ ಗ್ರಾ.ಪಂ. ಸದಸ್ಯರಾದ ಸುರೇಶ್, ರಾಜೇಶ್, ಸಿಬ್ಬಂದಿಗಳಾದ ನವೀನ್, ಸತೀಶ್, ಸುಬ್ರಮಣಿ ಭಾಗವಹಿಸಿದ್ದರು.