ಮಡಿಕೇರಿ, ಜೂ. 28: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಪ್ರವಾಹ ಮುನ್ನೆಚ್ಚರಿಕೆ ಸಭೆಯಲ್ಲಿ ನಿರ್ಣಯಿಸಿದಂತೆ ಅತಿವೃಷ್ಠಿಯಿಂದ ಉಂಟಾಗಬಹುದಾದ ಭೂಕುಸಿತ, ಸಂಚಾರಕ್ಕೆ ಅಡ್ಡಿ ಉಂಟಾಗುವ ಎಲ್ಲಾ ರೀತಿಯ ಸಿವಿಲ್ ಕಾರ್ಯಗಳು ಮತ್ತು ಸಂತ್ರಸ್ಥರುಗಳಿಗೆ ಗಂಜಿ ಕೇಂದ್ರ ಅಗತ್ಯ ವ್ಯವಸ್ಥೆ ಕಲ್ಪಿಸಲು ತಾಲೂಕುವಾರು ತಂಡಗಳನ್ನು ರಚಿಸಲಾಗಿದೆ.

ಸಂಬಂಧಿಸಿದ ಅಧಿಕಾರಿಗಳು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವದೇ ಅಡಚಣೆಯಾಗದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಆಯಾಯ ಪ್ರದೇಶದ ವ್ಯಾಪ್ತಿಯಲ್ಲಿ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದ್ದು ಈ ತಂಡದ ಮುಖ್ಯಸ್ಥರುಗಳು ಅಧಿಕಾರಿಗಳು ಪ್ರಕೃತಿ ವಿಕೋಪದ ಸಂದರ್ಭ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಯಾವದೇ ಅಡಚಣೆಯಾಗದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

ತಾಲೂಕುವಾರು ನೆರೆ ಉಂಟಾಗಬಹುದಾದ ಪ್ರದೇಶ ಮತ್ತು ತಂಡ ರಚನೆಯಲ್ಲಿ ಕಾರ್ಯನಿರ್ವಹಿಸಬೇಕಾದ ಅಧಿಕಾರಿಗಳ ವಿವರ ಇಂತಿದೆ: ಮಡಿಕೇರಿ ತಾಲೂಕಿನ ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಬೊಳಿಬಾಣೆ, ಅಯ್ಯಂಗೇರಿ ಪ್ರದೇಶಕ್ಕೆ ಸಂಬಂಧಿಸಿದಂತೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್, ಉಪ ವಿಭಾಗ, ಮಡಿಕೇರಿ (ತಂಡದ ಮುಖ್ಯಸ್ಥರು) ಕಚೇರಿ ದೂ.ಸಂ. 08272-225619, ಮೊಬೈಲ್ ಸಂ: 94480869103 ಹಾಗೂ ಸೆಸ್ಕ್ ಸಹಾಯಕ ಇಂಜಿನಿಯರ್, ಹೋಬಳಿ ಕೇಂದ್ರ ಕಂದಾಯ ಪರಿವೀಕ್ಷಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅರಣ್ಯ ವಲಯಾಧಿಕಾರಿ, ಅಗ್ನಿಶಾಮಕ ಠಾಣಾಧಿಕಾರಿಗಳು ಮತ್ತು ಪೊಲೀಸ್ ನಿರೀಕ್ಷಕರು.

ಮಡಿಕೇರಿ ನಗರಸಭಾ ವ್ಯಾಪ್ತಿಯ ಮಂಗಳಾದೇವಿ ನಗರ, ಮಲ್ಲಿಕಾರ್ಜುನ ನಗರ, ಪುಟಾಣಿನಗರ ಈ ಪ್ರದೇಶಗಳಿಗೆ ನಗರಸಭೆ, ಪೌರಾಯುಕ್ತರು, (ತಂಡದ ಮುಖ್ಯಸ್ಥರು) ಕಚೇರಿ-08272-228323, ಕಂಟ್ರೋಲ್ ರೂಂ. 220579, ಸಂಬಂಧಿಸಿದ ಸೆಸ್ಕಾಂ ಸಹಾಯಕ ಇಂಜಿನಿಯರ್, ಮಡಿಕೇರಿ ಕಂದಾಯ ಪರಿವೀಕ್ಷಕರು 08272-220111, 9844963858, ಅಗ್ನಿಶಾಮಕ ಠಾಣಾಧಿಕಾರಿ, ಪೊಲೀಸ್ ನಿರೀಕ್ಷಕರು.

ವೀರಾಜಪೇಟೆ ತಾಲೂಕಿನ ಬೇತ್ರಿ, ಕರಡಿಗೋಡು, ಕುಟ್ಟ ಗ್ರಾ.ಪಂ. ವ್ಯಾಪ್ತಿಯ ಪೂಜೆಕಲ್ಲು ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ಲಕ್ಮಣ ತೀರ್ಥ, ಕೊಂಡಂಗೇರಿ, ಗುಹ್ಯ, ಕೀರೆಹೊಳೆ, ಬಲ್ಯಮಂಡೂರು ಹಾಗೂ ಹರಿಹರ ಸೇತುವೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್, ಉಪವಿಭಾಗ, ವೀರಾಜಪೇಟೆ (ತಂಡದ ಮುಖ್ಯಸ್ಥರು) ಕಚೇರಿ ದೂ.ಸಂ. 08274-249053 ಮೊಬೈಲ್.ಸಂ 9448428821 ಹಾಗೂ ಸಂಬಂಧಿಸಿದ ಸೆಸ್ಕ್ ಸಹಾಯಕ ಎಂಜಿನಿಯರ್, ಹೋಬಳಿ ಕೇಂದ್ರ ಕಂದಾಯ ಪರಿವೀಕ್ಷಕರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅರಣ್ಯ ವಲಯಾಧಿಕಾರಿ, ಅಗ್ನಿಶಾಮಕ ಠಾಣಾಧಿಕಾರಿಗಳು ಮತ್ತು ಪೊಲೀಸ್ ನಿರೀಕ್ಷಕರು.

ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿ ತಾಲೂಕಿನ ನೆಲ್ಲಿಹುದಿಕೇರಿ, ಬೆಟ್ಟದಕಾಡುವಿಗೆ ಸಂಬಂಧಿಸಿದಂತೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಉಪವಿಭಾಗ, ಸೋಮವಾರಪೇಟೆ (ತಂಡದ ಮುಖ್ಯಸ್ಥರು) ಕಚೇರಿ ದೂ.ಸಂ.08276-282015, ಮೊಬೈಲ್.ಸಂ 9480290309 ಹಾಗೂ ಸಂಬಂಧಿಸಿದ ಸೆಸ್ಕ್ ಸಹಾಯಕ ಇಂಜಿನಿಯರ್, ಹೋಬಳಿ ಕೇಂದ್ರ ಕಂದಾಯ ಪರಿವೀಕ್ಷಕರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅರಣ್ಯ ವಲಯಾಧಿಕಾರಿ, ಅಗ್ನಿಶಾಮಕ ಠಾಣಾಧಿಕಾರಿಗಳು ಮತ್ತು ಪೊಲೀಸ್ ನಿರೀಕ್ಷಕರುಗಳನ್ನು ನೇಮಿಸಲಾಗಿದೆ.