ಮಡಿಕೇರಿ, ಜ.2 : ಮೂರ್ನಾಡು ಗೌತಮ್ ಫ್ರೆಂಡ್ಸ್ ಸಂಘದ ವತಿಯಿಂದ ಮಾ.22 ಮತ್ತು 23 ರಂದು 2ನೇ ವರ್ಷದ ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾವಳಿ ಮೂರ್ನಾಡಿನಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಬ್ದುಲ್ ರೆಹಮಾನ್ ಐ.ಪಿ.ಎಲ್ ಮಾದರಿಯಲ್ಲಿ ಲೀಗ್ ವಾಲಿಬಾಲ್ ಪಂದ್ಯಾವಳಿಯನ್ನು ಮೂರ್ನಾಡು ಮೈದಾನದಲ್ಲಿ ನಡೆಸಲಾಗುವದು ಎಂದರು.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸುವ ತಂಡಕ್ಕೆ 40 ಸಾವಿರ ರೂ. ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ 25 ಸಾವಿರ ನಗದು ಹಾಗೂ ಟ್ರೋಫಿ ಮತ್ತು ಸೆಮಿ ಫೈನಲ್‍ನಲ್ಲಿ ಪರಾಭವಗೊಳ್ಳುವ ತಂಡಕ್ಕೆ ತಲಾ 10 ಸಾವಿರ ನಗದನ್ನು ನೀಡಲಾಗುವದು ಎಂದು ಅಬ್ದುಲ್ ರೆಹಮಾನ್ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ 9740797375, 9740301963 ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗೌತಮ್ ಫ್ರೆಂಡ್ಸ್ ತಂಡದ ನಾಯಕರಾಗಿರುವ ಗೌತಮ್ ಹಾಗೂ ಸುಮನ್ ಉಪಸ್ಥಿತರಿದ್ದರು.