ಗುಡ್ಡೆಹೊಸೂರು, ಆ. 26:ಇತ್ತೀಚೆಗೆ ಹತ್ಯೆಗೀಡಾದ ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದ ಪ್ರವೀಣ್ ಪೂಜಾರಿ ಮನೆಗೆ ದಕ್ಷಿಣಪ್ರಾಂತ್ಯ ಗೋರಕ್ಷಕ ಪ್ರಮುಖ ರಘು ಅವರು ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಮಾಜ ಸೇವಕ ಜಯಣ್ಣಭಾರವಳ್ಳಿ ಮತ್ತು ಕುಶಾಲನಗರದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು.ಈ ಸಂಧರ್ಭ ಮಾತನಾಡಿದ ರಘು ಅವರು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಿಸಲು ಬಿಡುವದಿಲ್ಲ. ಅಲ್ಲದೆ ಸರಕಾರ ಟಿಪ್ಪು ಜಯಂತಿ ಆಚರಿಸಲು ಮುಂದಾಗಬಾರದು ಎಂದು ಒತ್ತಾಯಿಸಿದರು. ಬಡತನದಿಂದ ಕೂಡಿರುವ ಪ್ರವೀಣ್ ಕುಟುಂಬಕ್ಕೆ ಸರಕಾರ ಘೋಷಿಸಿರುವ ರೂ. 5 ಲಕ್ಷ ಹಣವನ್ನು ತಕ್ಷಣವೇ ನೀಡಬೇಕು ಎಂದು ಒತ್ತಾಯಿಸಿದರು. ಭಯೋತ್ಪಾದಕ ಚಟುವಟಿಕೆಗಳನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂಬದಾಗಿ ತಿಳಿಸಿದರು. ಈ ಸಂದರ್ಭ ಆರ್.ಎಸ್.ಎಸ್. ಮತ್ತು ಭಜರಂಗ ದಳದ ನೂರಾರು ಮಂದಿ ಕಾರ್ಯಕರ್ತರು ಹಾಜರಿದ್ದರು.