ಸುಂಟಿಕೊಪ್ಪ, ನ. 26: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಬಾಲಕರು ಫುಟ್ಬಾಲ್ ಸ್ಪರ್ಧೆ ಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಸೂಕ್ತ ಅನುದಾನ ಕೊರತೆಯಿಂದ ಪ್ರತಿಭೆಗಳಿಗೆ ತೊಂದರೆಯಾಗಿದೆ ಎಂದು ‘ಪತ್ರಿಕೆ’ಯಲ್ಲಿ ಬಂದ ವರದಿಗೆ ಸ್ಪಂದನೆ ದೊರಕಿದೆ.
ಸುಂಟಿಕೊಪ್ಪ ಕ್ಷೇತ್ರದ ಜಿ.ಪಂ. ಸದಸೆÀ್ಯ ಕೆ.ಪಿ. ಚಂದ್ರಕಲಾ ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಭೆÉೀಟಿ ನೀಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿರುವ ಮಕ್ಕಳ ಸಾಧನೆಯನ್ನು ಪ್ರಶಂಶಿಸಿದರು. ನಂತರ ಸಮಸ್ಯೆಗಳನ್ನು ಆಲಿಸಿ, ಜಿ.ಪಂ.ನಿಂದ ರೂ. 10,000 ಅನುದಾನ ದೊರಕಿಸಿಕೊಡುವದಲ್ಲದೆ, ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸರಕಾರಿ ಶಾಲೆಯ ಕ್ರೀಡಾಪಟುಗಳಿಗೆ ಶಾಶ್ವತ ಅನುದಾನವನ್ನು ಒದಗಿಸಿಕೊಡಲು ಜಿ.ಪಂ.ನಲ್ಲಿ ನಿರ್ಣಯ ಕೈಗೊಂಡು ಅನುದಾನವನ್ನು ಬಜೆಟ್‍ನಲ್ಲಿ ನಿಗದಿಪಡಿಸಲು ಕ್ರಮ ಕೈಗೊಳ್ಳಲಾಗುವ ದೆಂದು ಭರವಸೆ ನೀಡಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಿಂದ ರಾಷ್ಟ್ರಮಟ್ಟದ ಫುಟ್ಬಾಲ್ ಕ್ರೀಡೆಗೆ ಆಯ್ಕೆಯಾದ ಇಲ್ಲಿನ ಶಾಲಾ ಮಕ್ಕಳಿಗೆ ರೂ. 5,000 ಅನುದಾನವನ್ನು ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ಕೆ.ಇ. ಕರೀಂ, ಶಾಲೆಯ ಮುಖ್ಯೋಪಾಧ್ಯಾಯರಾದ ಗೀತಾ, ದೈಹಿಕ ಶಿಕ್ಷಣ ಶಿಕ್ಷಕ ನಂದಾ ಹಾಗೂ ಫುಟ್ಬಾಲ್ ಕ್ರೀಡಾಪಟುಗಳು ಉಪಸ್ಥಿತರಿದ್ದರು.