ಶನಿವಾರಸಂತೆ, ನ. 5: ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಪಟ್ಟಣದಲ್ಲಿ ಪೊಲೀಸ್ ಪಥ ಸಂಚಲನ ನಡೆಸಿತು.
ರಕ್ಷಣಾ ಕವಚ ಧರಿಸಿದ ಶನಿವಾರಸಂತೆ ಪೊಲೀಸ್ ಠಾಣೆಯ ಪೊಲೀಸರು ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೆ ಪಥ ಸಂಚಲನ ನಡೆಸಿದರು.
ಪಿಎಸ್ಐ ಎಚ್.ಎಂ. ಮರಿಸ್ವಾಮಿ, ಎ.ಎಸ್.ಐ.ಗಳಾದ ಜನಾರ್ದನ್, ಖತೀಜಾ, ಗೋವಿಂದ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.