ವೀರಾಜಪೇಟೆ, ಆ. 4: ಕಳಸಾ ಬಂಡೂರಿ ಮಹದಾಯಿ ನೀರು ಹಂಚಿಕೆ ಹೋರಾಟದ ವಿಚಾರದಲ್ಲಿ ಭುಗಿಲೆದ್ದ ಜನರು ಆಕ್ರೋಶಗೊಂಡು ಬೀದಿಗಿಳಿದು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಪೊಲೀಸರು ವೃದ್ಧರಿಗೆ, ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೂ ಮನ ಬಂದಂತೆ ಹಲ್ಲೆ ನಡೆಸಿರುವದನ್ನು ಖಂಡಿಸಿ ಸಿ.ಪಿ.ಐ.ಎಂ. ಪಕ್ಷದಿಂದ ವೀರಾಜಪೇಟೆ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿ.ಪಿ.ಐ.ಎಂ. ಪಕ್ಷದ ಮುಖಂಡ ವಕೀಲ ಕೆ.ವಿ. ಸುನೀಲ್, ರಫೀಕ್, ಜಿಲ್ಲಾ ಕಾರ್ಯದರ್ಶಿ ಡಾ,ದುರ್ಗಾಪ್ರಸಾದ್, ನಗರ ಕಾರ್ಯದರ್ಶಿ ಶಾಜಿ ರಮೇಶ್, ಜಿಲ್ಲಾ ಸಮಿತಿಯ ಎ.ಸಿ. ಸಾಬು ಮಾತನಾಡಿದರು. ಸಂಘಟನೆಯ ರತೀಶ್, ಶ್ರೀದರ್, ಪದ್ಮಿನಿ, ವಿನೋದ್, ಖಾಶಿಂ, ಬಾಬು ಮುಂತಾದವರು ಭಾಗವಹಿಸಿದ್ದರು.